ಮುಂಬರುವ ತೆಲಗು ಚಿತ್ರ 'ಪ್ರೇಮಂ' ತೆರೆ ಕಂಡ ಬಳಿಕ ನಟ ನಾಗಚೈತನ್ಯ ಮತ್ತು ಸಮಂತಾ ಮದುವೆಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. 'ಮನಂ' ಚಿತ್ರದ ಬಳಿಕ ಸಮಂತಾ ಹಾಗೂ ಚೈತನ್ಯ ಪ್ರೇಮಿಸುತ್ತಿದ್ದಾರೆ ಎನ್ನುವ ಸುದ್ದಿಯಿತ್ತು.
ಕೆಲ ಆತ್ಮೀಯರಲ್ಲಿ ಸಮಂತಾ ತನ್ನ ಮದುವೆಯ ವಿಚಾರವನ್ನು ಮಾತನಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಕೆಲ ದಿನದ ಹಿಂದೆ ನಾಗ ಚೈತನ್ಯ ತಂದೆ, ನಟ ನಾಗಾರ್ಜುನ ಕೂಡ ಮದುವೆ ಕುರಿತು ಸುದ್ದಿ ಬಹಿರಂಗ ಪಡಿಸಿದ್ದರು. ಕೆಲವೇ ದಿನಗಳಲ್ಲಿ ಇವರಿಬ್ಬರ ಮದುವೆ ಕುರಿತಂತೆ ಅಧಿಕೃತ ಮಾಹಿತಿ ಸಿಗಬಹುದು.
ಸದ್ಯ ಲಿವೀಂಗ್ ಟುಗೆದರ್‌ನಲ್ಲಿರುವ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗ್ತಿತ್ತು.
ಗಚಿಬೌಲಿಯಲ್ಲಿರುವ ನಾಗಚೈತನ್ಯ ಫ್ಲಾಟ್‌ಲ್ಲಿ ಸಮಂತಾ ಒಟ್ಟಿಗೆ ಇದ್ದಾರೆ ಎಂದು ತಿಳಿದು ಬಂದಿತ್ತು. ಇವರಿಬ್ಬರು ಲಿವಿಂಗ್ ಟುಗೆದರ್‌ನಲ್ಲಿ ಇದ್ದಾರೆ. ಇದರ ಜತೆಗೆ ಸಮಂತಾ ಪಾರ್ಕ್ ಹ್ಯಾಟ್‌ನಲ್ಲಿ ಮನೆಯನ್ನು ಬಿಟ್ಟು ನಾಗ ಚೈತನ್ಯ ಜತೆ ಹೊಟೇಲ್‌ನಲ್ಲಿ ಇದ್ದಾರೆ ಎಂದು ಹೇಳಲಾಗ್ತಿತ್ತು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ