Select Your Language

Notifications

webdunia
webdunia
webdunia
webdunia

ಸಲ್ಲು ಭರ್ಜರಿ ದಾಖಲೆ..ಗೂಗಲ್ ಸರ್ಚ್‌ಗೆ ಒಳಗಾದ ನಟರಲ್ಲಿ ಸಲ್ಮಾನ್‌ಗೆ ಮೊದಲ ಸ್ಥಾನ

ಸಲ್ಲು ಭರ್ಜರಿ ದಾಖಲೆ..ಗೂಗಲ್ ಸರ್ಚ್‌ಗೆ  ಒಳಗಾದ ನಟರಲ್ಲಿ ಸಲ್ಮಾನ್‌ಗೆ ಮೊದಲ ಸ್ಥಾನ
ಮುಂಬೈ , ಶನಿವಾರ, 16 ಜುಲೈ 2016 (10:32 IST)
ಸಲ್ಮಾನ್ ಖಾನ್ ಭರ್ಜರಿ ದಾಖಲೆಯೊಂದಕ್ಕೆಸಾಕ್ಷಿಯಾಗಿದ್ದಾರೆ. ಕಳೆದ 10 ವರ್ಷಗಳಲ್ಲಿ ಗೂಗಲ್ ನಲ್ಲಿ ಅತ್ಯಂತ ಹೆಚ್ಚು ಸರ್ಚ್ ಆಗಿರುವ ಹೆಸರು ಅಂದ್ರೆ ಅದು ಸಲ್ಮಾನ್ ಖಾನ್ ಅವರದ್ದು. ಅವರ ಬಗ್ಗೆ ಮಾಹಿತಿ ಪಡೆಯೋದಕ್ಕೆ ಕೋಟ್ಯಂತರ ಜನ ಗೂಗಲ್ ನಲ್ಲಿ ಸಲ್ಮಾನ್ ಖಾನ್ ಅವರ ಹೆಸರನ್ನು ಹಾಕಿದ್ದಾರಂತೆ.


ನಟ ಸಲ್ಮಾನ್ ಖಾನ್ ಅವರು ಅಭಿನಯಿಸಿರುವ ಸುಲ್ತಾನ್ ಸಿನಿಮಾಕ್ಕೆ ಈಗಾಗಲೇ ಭರ್ಜರಿ ರೆಸ್ಪಾನ್ ಸಿಕ್ಕಿದೆ. ಸಿನಿಮಾ ನೋಡಿದ ಮಂದಿಯೆಲ್ಲಾ ಸಲ್ಮಾನ್ ಭಾಯಿ ಭೇಷ್ ಅನ್ನುತ್ತಿದ್ದಾರೆ. 
 
ಅಂದ್ಹಾಗೆ ಸರ್ಚ್ ಗೆ ಒಳಗಾದ ನಟರಲ್ಲಿ ಮುಂಚೂಣಿಯಲ್ಲಿ ಸಲ್ಮಾನ್ ಖಾನ್ ಇಂದ್ರೆ ಅವರ ನಂತರದ ಸ್ಥಾನವನ್ನು ಶಾರುಖ್ ಖಾನ್, ಬಳಿಕ ಅಕ್ಷಯ್ ಕುಮಾರ್,ಅಮಿತಾಬ್ ಬಚ್ಚನ್,ಹೃತಿಕ್ ರೋಷನ್, ಶಾಹೀದ್ ಕರಪೂರ್ ರಣ್ ಬೀರ್ ಕಪೂರ್,ಆಮೀರ್ ಖಾನ್ ಹೀಗೆ ಅನೇಕರು ಪಡೆದಿದ್ದಾರೆ.
 
ಸಲ್ಲು ಸದ್ಯ ತಮ್ಮ ಸುಲ್ತಾನ್ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಸಿನಿಮಾ ರಿಲೀಸ್ ಆದ ಒಂದೇ ವಾರದಲ್ಲಿ ಬರೋಬ್ಬರಿ 200 ಕೋಟಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಅವರು ಸಲ್ಲುಗೆ ಮೊದಲ ಬಾರಿಗೆ  ನಾಯಕಿಯಾಗಿದ್ದಾರೆ. ಅಲಿ ಅಬ್ಬಾಸ್ ಜಾಫರ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್‌ಕುಮಾರ್‌ಗೆ ಭೇಟಿಯಾದ ಕಿಚ್ಚ ಸುದೀಪ್