Select Your Language

Notifications

webdunia
webdunia
webdunia
webdunia

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸಲ್ಮಾನ್ ಖಾನ್‌ಗೆ ಸಮನ್ಸ್?

summon Salman Khan
ಮುಂಬೈ , ಮಂಗಳವಾರ, 28 ಜೂನ್ 2016 (13:47 IST)
ಮಹಿಳೆಯರ ರೇಪ್ ಹೇಳಿಕೆ ಕುರಿತಂತೆ ನಟ ಸಲ್ಮಾನ್ ಖಾನ್‌ಗೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ಸಮನ್ಸ್ ನೀಡಲಾಗಿದೆ ಎಂದು ಹೇಳಲಾಗಿದೆ. ಸಲ್ಮಾನ್ ಹೇಳಿಕೆ ಕುರಿತಂತೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿತ್ತು. ಸಲ್ಮಾನ್ ಹೇಳಿಕೆ ನೀಡಿರುವುದರ ಬಗ್ಗೆ ಮಹಿಳಾ ಆಯೋಗವು ಕೂಡ ಗಂಭೀರವಾಗಿ ಪರಿಗಣಿಸಿದೆಯಂತೆ.


ಈ  ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಸಮನ್ಸ್ ನೀಡಿದೆ ಎನ್ನಲಾಗಿದೆ. ಅದಕ್ಕಾಗಿ ಸಲ್ಮಾನ್ ಹೇಳಿಕೆಯನ್ನು 
ಗಂಭೀರವಾಗಿ ತೆಗೆದುಕೊಂಡಿದೆ. 
 
ಇನ್ನೂ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥರಾಗಿರುವ ಲಲಿತಾ ಕುಮಾರ್‌ಮಗಲಂ ಸಲ್ಮಾನ್ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಹಾಗೂ ವಿವರಣೆ ನೀಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. 
 
ಇತ್ತೀಚೆಗೆ ಬಿಹಾರ ಅತ್ಯಾಚಾರ ಪ್ರಕರಣದ ಕುರಿತು ಪ್ರಶ್ನೆ ಮಾಡಿರುವ ಅವರು, ರಾಜ್ಯ ಸರ್ಕಾರ ಮಹಿಳೆಯರ ವಿರುದ್ದ ಅಪರಾಧಗಳನ್ನು ನಿಭಾಯಿಸುತ್ತಿದ್ದೇಯೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಬಿಹಾರದ ಪರಿಸ್ಥಿತಿಯ ಬಗ್ಗೆ ಗೃಹ ಸಚಿವಾಲಯ ಎದುರು ಕೊಂಡೊಯ್ಯಲಾಗುವುದು ಎಂದು ಮುಖ್ಯಸ್ಥೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಮಾದಕ ನೋಟದಲ್ಲಿ ಮುಖಪುಟಕ್ಕೆ ಪೋಸ್ ನೀಡಿದ ಬೆಬೋ