ಸೂಪರ್ ಸ್ಚಾರ್ ಸಲ್ಮಾನ್ ಖಾನ್ ಯಂಗ್ ಜನರೇಷನ್ ಬಗ್ಗೆ ಮಾತನಾಡಿದ್ದಾರೆ. ಸಲ್ಮಾನ್ ಪ್ರಕಾರ ಇಂದಿನ ಯುವಕರಲ್ಲಿ ಹೆಚ್ಚು ಗೌರವ ಮನೋಭಾವವಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಯಂಗ್ ಫ್ಯಾನ್ಸ್ ಗಳ ಬಗ್ಗೆ ಸಲ್ಲು ಪೋಸ್ಟ್ ಮಾಡಿದ್ದಾರೆ..
50 ವರ್ಷದ ಸಲ್ಮಾನ್ ಖಾನ್ ಭಜರಂಗಿ ಭಾಯ್‌ಜಾನ್ ಭಾವಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.. ಈ ಚಿತ್ರದಲ್ಲಿ ಏರ್‌ಪೋರ್ಟ್‌ನಲ್ಲಿ ಕೆಲ ಜನರು ಓಪನ್ ಆಗಿ ತಮ್ಮ ಮೊಬೈಲ್‌ನಲ್ಲಿ ಮಾತಾಡಿಕೊಂಡಿದ್ದಾರೆ. ಪ್ರಾಮಾಣಿಕತೆ ಹಾಗೂ ಗೌರವವನ್ನು ಹೊಂದಿರುವ ಇಂದಿನ ಯುವಪೀಳಿಗೆ ಅದ್ಫುತ ಎಂದು ಹೊಗಳಿದ್ದಾರೆ ಸಲ್ಮಾನ್...
ಸುಲ್ತಾನ್ ಚಿತ್ರವನ್ನು ಅಲಿ ಅಬ್ಬಾಸ್ ಜಫರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕುಸ್ತಿಪಟು ಪಾತ್ರಕ್ಕಾಗಿ ಸಲ್ಮಾನ್ ರಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಯಶ್‌ರಾಜ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಸುಲ್ತಾನ್ ಚಿತ್ರದಲ್ಲಿ ಅನುಶ್ಕಾ ಶರ್ಮಾ ಸೇರಿದಂತೆ ಹಲವರು ಇದ್ದಾರೆ. ಈದ್ ಹಬ್ಬದಂದು ಚಿತ್ರ ರಿಲೀಸ್ ಆಗಲಿದೆ.