Select Your Language

Notifications

webdunia
webdunia
webdunia
webdunia

ಜೊತೆಯಾಗಿ ಈದ್ ಹಬ್ಬವನ್ನು ಆಚರಿಸಿದ ಅರ್ಬಾಜ್ ಖಾನ್ ಹಾಗೂ ಮಲ್ಲಿಕಾ ಅರೋರಾ

ಜೊತೆಯಾಗಿ ಈದ್ ಹಬ್ಬವನ್ನು ಆಚರಿಸಿದ ಅರ್ಬಾಜ್ ಖಾನ್ ಹಾಗೂ ಮಲ್ಲಿಕಾ ಅರೋರಾ
, ಶನಿವಾರ, 9 ಜುಲೈ 2016 (09:54 IST)
ಈ ಬಾರಿಯ ಈದ್ ಹಬ್ಬ ಸಲ್ಮಾನ್ ಖಾನ್ ಅವರ ಮನೆಯಲ್ಲಿ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚು ಮಾಡಿತ್ತು.ಒಂದು ಕಡೆ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಪುತ್ರ ಆಹಿಲ್ ಆಗಮನದ ಖುಷಿಯಾದ್ರೆ ಮತ್ತೊಂದು ಕಡೆ ಸಲ್ಮಾನ್ ಖಾನ್ ಅವರ ಸುಲ್ತಾನ್ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೆಲ್ಲಕ್ಕಿಂತ ಸಂತೋಷದ ವಿಚಾರ ಮತ್ತೊಂದಿದೆ.

ಹೌದು... ಈ ಬಾರಿ ಸಲ್ಲು ಮನೆಯಲ್ಲಿ ಈದ್ ಹಬ್ಬ ತುಂಬಾನೇ ಕಳೆಗಟ್ಟಿತ್ತು. ಕುಟುಂಬದ ಸದಸ್ಯರೆಲ್ಲಾ ಜೊತೆಯಾಗಿ ಸೇರಿ ಹಬ್ಬವನ್ನು ಆಚರಿಸಿದ್ರು, ಅದರಲ್ಲೂ ಸಂತೋಷದ ಸಂಗತಿ ಅಂದ್ರೆ ಇನ್ನೇನು ದೂರವಾಗಿ ಬಿಟ್ರು ಅಂತಾ ಸುದ್ದಿಯಾಗಿದ್ದ ಅರ್ಬಾಜ್ ಖಾನ್ ಹಾಗೂ ಮಲ್ಲಿಕಾ ಅರೋರ  ದಂಪತಿ ಜೊತೆಯಾಗಿ ಈದ್ ಹಬ್ಬವನ್ನು ಆಚರಿಸಿದ್ದು. ದಂಪತಿ ಮತ್ತೆ ಒಂದಾಗಿ ಹಬ್ಬ ಆಚರಿಸಿದ್ದು ಸಲ್ಲು ಮನೆಯಲ್ಲಿ ದೊಡ್ಡ ಸಂಭ್ರಮವನ್ನು ಮೂಡಿಸಿತ್ತು. ಅಲ್ಲದೇ ಇಬ್ಬರು ಜೊತೆಯಾಗಿ ಫೋಟೋಗೆ ಫೋಸ್ ಕೊಟ್ಟಿದ್ದು ಮನೆ ಮಂದಿಯಲ್ಲಿ ಖುಷಿ ಮೂಡಿಸಿತ್ತು.
 
ಇನ್ನು ಮನೆ ಮಂದಿಯೆಲ್ಲಾ ಹಬ್ಬ ಆಚರಿಸುವ ವೇಳೆ ಫೋಟೋಗೆ ಫೋಸ್ ಕೊಟ್ಟಿರೋದನ್ನು ಅರ್ಪಿತಾ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.ಆದ್ರೆ ಫೋಟೋದಲ್ಲಿ ಸಲ್ಲು ಭಾಯಿ ಮಾತ್ರ ಮಿಸ್ ಆಗಿದ್ದಾರೆ.ಇನ್ನುಳಿದಂತೆ ಸೋಹೈಲ್ ಖಾನ್ ಸೀಮಾ ಖಾನ್,ಅರ್ಬಾಜ್ ಖಾನ್ , ಮಲ್ಲಿಕಾ ಅರೋರಾ, ಅರ್ಪಿತಾ ಖಾನ್, ಆಯುಷ್ ಶರ್ಮಾ,ಸಲ್ಲು ಸಹೋದರಿ ಅಲ್ವಿರಾ ಭಾವ ಅತುಲ್ ಅಗ್ನಿಹೋತ್ರಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಬ್ಬಕ್ಕೆ ಮಗನಿಗೆ ಕೇವಲ ಎರಡು ರೂಪಾಯಿ ನೀಡಿದ್ದೇಕೆ ಆಮೀರ್ ಖಾನ್