Select Your Language

Notifications

webdunia
webdunia
webdunia
webdunia

ಹಬ್ಬಕ್ಕೆ ಮಗನಿಗೆ ಕೇವಲ ಎರಡು ರೂಪಾಯಿ ನೀಡಿದ್ದೇಕೆ ಆಮೀರ್ ಖಾನ್

ಹಬ್ಬಕ್ಕೆ ಮಗನಿಗೆ ಕೇವಲ ಎರಡು ರೂಪಾಯಿ ನೀಡಿದ್ದೇಕೆ ಆಮೀರ್ ಖಾನ್
, ಶನಿವಾರ, 9 ಜುಲೈ 2016 (09:52 IST)
ಬಾಲಿವುಡ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು ಆಮೀರ್ ಖಾನ್.ಆದ್ರೆ ಇಷ್ಟೆಲ್ಲಾ ಸಂಭಾವನೆ ಪಡೆಯೋ ಆಮೀರ್ ಖಾನ್ ಅವರು ಈದ್ ಹಬ್ಬಕ್ಕೆ ಮಗನಿಗೆ ನೀಡಿದ ಪಾಕೆಟ್ ಮನಿ ಬಗ್ಗೆ ಕೇಳಿದ್ರೆ ಯಾರಿಗಾದ್ರೂ ಅಚ್ಚರಿಯಾಗುತ್ತೆ. ಅವರು ಹಬ್ಬಕ್ಕೆ ಮಗ ಅಯಾಜ್ ಗೆ ನೀಡಿದ್ದು ಕೇವಲ ಎರಡು ರೂಪಾಯಿ.

ಹೌದು... ಮೊನ್ನೆ ಆಮೀರ್ ಖಾನ್ ಅವರು ತಮ್ಮ ತಾಯಿಯ ಮನೆಯಲ್ಲಿ ಈದ್ ಹಬ್ಬವನ್ನು ಆಚರಿಸಿದ್ರು. ಈದ್ ಹಬ್ಬಕ್ಕೆ ಉಡುಗೊರ ಕೊಡೋದು ಮಕ್ಕಳಿಗೆ ಪಾಕೆಟ್ ಮನಿ ಕೊಡೋದು ಸಾಮಾನ್ಯ.ಆದ್ರೆ ಆಮೀರ್ ಖಾನ್ ಅವರು ಮಾತ್ರ ಮಗ ಅಯಾಜ್‌ಗೆ ಕೇವಲ ಎರಡು ರೂಪಾಯಿ ನೀಡಿದ್ರು. ಇದಕ್ಕೆ ಕಾರಣ ಕೂಡ ನೀಡಿದ್ದಾರೆ ಆಮೀರ್. ಯಾಕಂದ್ರೆ ಮಕ್ಕಳಿಗೆ ನಾವು ಈಗಲೇ ಹೆಚ್ಚು ಹೆಚ್ಚು ಹಣ ನೀಡಿ ಅವರನ್ನು ಅದೇ ರೀತಿ ಬೆಳೆಸಿದ್ರೆ ಅವರು ಮುಂದೆ ದುಂದು ವೆಚ್ಚಕ್ಕೆ ಹೊಂದಿಕೊಳ್ಳುತ್ತಾರೆ. ಹಾಗಾಗಿಯೇ ನಾನು ಈಗಲೇ ಆತನಿಗೆ ಅದರ ಬಗ್ಗೆ ಎಚ್ಚರವಾಗಿರುತ್ತೆ ಕಲಿಸುತ್ತಿದ್ದೇನೆ ಅಂತಾ ಆಮೀರ್ ಹೇಳಿದ್ದಾರೆ.
 
ಇನ್ನು ಪ್ರತಿ ವರ್ಷ ನಾನು ಈದ್ ಹಬ್ಬವನ್ನು ನನ್ನ ಕುಟುಂಬದವರೊಂದಿಗೆ ಕಳೆಯುತ್ತಿದ್ದೇನೆ. ಆ ದಿನ ಪೂರ್ತಿ ನನ್ನ ಕುಟುಂಬ ಸದಸ್ಯರೆಲ್ಲಾ ಸೇರಿ ಎಂಜಾಯ್ ಮಾಡುತ್ತೇವೆ.ಅಲ್ಲದೇ ಪರ್ತಿ ವರ್ಷ ಈದ್ ಹಬ್ಬಕ್ಕೆ ಸಲ್ಮಾನ್ ಖಾನ್ , ಶಾರುಖ್ ಖಾನ್ ಹಾಗೂ ಆಮೀರ್ ಖಾನ್ ಅವರು ಬಿರಿಯಾನಿಯನ್ನು ಹಂಚಿಕೊಳ್ಳುತ್ತಾರಂತೆ. ಹಾಗಂಥ ಆಮೀರ್ ಖಾನ್ ಅವರೇ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಹಾಗೂ ಆಮೀರ್ ಖಾನ್ ನನಗಿಂತ ದೊಡ್ಡ ಸ್ಟಾರ್ ಗಳು- ಶಾರುಖ್ ಖಾನ್