Webdunia - Bharat's app for daily news and videos

Install App

ಫ್ಯಾಮಿಲಿ ಜೊತೆ ಟೂರ್ ಹೊರಟ ಸೈಫ್ ಅಲಿ ಖಾನ್ ಏರ್ ಪೋರ್ಟ್ ನಲ್ಲೇ ಸ್ಟಾಫ್ ಜೊತೆಗೆ ಕಿತ್ತಾಟ

Webdunia
ಸೋಮವಾರ, 18 ಡಿಸೆಂಬರ್ 2023 (10:10 IST)
Photo Courtesy: Twitter
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಕ್ರಿಸ್ ಮಸ್ ವೇಳೆಗೆ ಫ್ಯಾಮಿಲಿ ಸಮೇತ ಟೂರ್ ಹೊರಟಿದ್ದಾರೆ. ಈ ವೇಳೆ ಏರ್ ಪೋರ್ಟ್ ನಲ್ಲೇ ಸ್ಟಾಫ್ ಜೊತೆ ಕಿತ್ತಾಡಿದ್ದಾರೆ.

ಕ್ರಿಸ್ ಮಸ್ ಸಂದರ್ಭದಲ್ಲಿ ಬಹುತೇಕ ತಾರೆಯರು ವಿದೇಶಗಳಿಗೆ ಕುಟುಂಬ ಸಮೇತ ಪ್ರವಾಸ ತೆರಳುತ್ತಾರೆ. ಸೈಫ ಕೂಡಾ ತಮ್ಮ ಪತ್ನಿ ಕರೀನಾ, ಮಕ್ಕಳ ಜೊತೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.

ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ಸೈಫ್ ಭದ್ರತಾ ತಪಾಸಣೆ ಬಳಿಕ ತಮ್ಮ ಬ್ಯಾಗ್ ಹೊತ್ತುಕೊಂಡು ಜೊತೆಗೆ ಬಂದಿದ್ದ ತಮ್ಮ ಸ್ಟಾಫ್ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಸೈಫ್ ಒಂದೇ ಸಮ ಜೋರಾಗಿ ಕೂಗಾಡುತ್ತಿದ್ದರೆ ಸ್ಟಾಫ್ ಸಮಜಾಯಿಷಿ ನೀಡಲು ಯತ್ನಿಸುತ್ತಿದ್ದುದು ಕಂಡುಬಂತು.

ಪತಿಯ ರೋಷಾವೇಷ ಕಂಡು ಮುಂದೆ ಹೋಗಿದ್ದ ಕರೀನಾ ಮರಳಿ ಬಂದು ಸಮಾಧಾನಿಸಬೇಕಾಯಿತು. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರ ನಡುವೆ ಕಿತ್ತಾಟಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಆದರೆ ಈ ಬಗ್ಗೆ ಕಾಮೆಂಟ್ ಮಾಡಿರುವ ನೆಟ್ಟಿಗರು ಏನೇ ಅಸಮಾಧಾನವಿದ್ದರೂ ಅದನ್ನು ಹೀಗೆ ಬಹಿರಂಗವಾಗಿ ಎಲ್ಲರ ಮುಂದೆ ತೋರಿಸುವ ಅಗತ್ಯವಿತ್ತೇ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments