Select Your Language

Notifications

webdunia
webdunia
webdunia
webdunia

ರನ್ ಆಂಟೋನಿ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಸಿಂಗಿಂಗ್

ರನ್ ಆಂಟೋನಿ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಸಿಂಗಿಂಗ್
ಬೆಂಗಳೂರು , ಮಂಗಳವಾರ, 24 ಮೇ 2016 (10:12 IST)
ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅವರು ಅಭಿನಯಿಸುತ್ತಿರುವ ಎರಡನೇ ಸಿನಿಮಾ ರನ್ ಆಂಟೋನಿ. ಈಗಾಗಲೇ ನಾನಾನ ಕಾರಣಗಳಿಂದ ಸುದ್ದಿಗೆ ಗ್ರಾಸವಾಗಿರುವ ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ಕಂಠಸಿರಿಯನ್ನು ಪ್ರದರ್ಶಿಸಿದ್ದಾರೆ. 
ರನ್ ಆಂಟೋನಿ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರು ಜನಕ್ ಜನಕ್ ಅನ್ನೋ ಮೆಲೋಡಿಯಸ್ ಸಾಂಗ್ ನ್ನು ಹಾಡಿದ್ದಾರೆ. ಈಗಾಗಲೇ ಅಪ್ಪು ಹಾಡಿರುವ ಹಾಡು ಯೂ ಟ್ಯೂನ್ ನಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳಿಗೆ ಸಾಂಗ್ ತುಂಬಾನೇ ಇಷ್ಟವಾಗಿದೆ, ಅಂದ್ಹಾಗೆ ಈ ಹಾಡನ್ನು ವಿನಯ್ ಗಾಗಿ ತುಂಬಾನೇ ಪ್ರೀತಿಯಿಂದ ಹಾಡಿದ್ದಾರಂತೆ  

ಪುನೀತ್ ರಾಜ್ ಕುಮಾರ್ ಅವರು.  ರನ್ ಆಂಟೋನಿ ಸಿನಿಮಾ ರೊಮ್ಯಾಂಟಿಕ್ ಕಥೆಯಾಧಾರಿತ ಸಿನಿಮಾವಾಗಿದ್ದು, ಸಿನಿಮಾದಲ್ಲಿ ವಿನಯ್ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. 
 
ಇನ್ನು ಸಿನಿಮಾಗೆ ನಾಯಕಿಯರಾಗಿ ರುಕ್ಸಾನಾ ಹಾಗೂ ಸುಷ್ಮಿತಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ವಿನಯ್ ಸಹೋದರ ಗುರುರಾಜ್ ಕುಮಾರ್ ನಿರ್ಮಾಪಕರಾಗಿದ್ದಾರೆ. ಅಂದ್ಹಾಗೆ ಈ ಸಿನಿಮಾವನ್ನು ರಘು ಶಾಸ್ತ್ರಿ ನಿರ್ದೇಶನ ಮಾಡುತ್ತಿದ್ದಾರೆ. ಮನೋಹರ್  ಜೋಷಿ  ಛಾಯಾಗ್ರಹಣ ಸಿನಿಮಾಕ್ಕಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಡೆಲ್ ಆದ್ರು ಸುಧಾರಾಣಿ ಪುತ್ರಿ ನಿಧಿ ಗೋವರ್ಧನ್