Select Your Language

Notifications

webdunia
webdunia
webdunia
webdunia

ಮಾಡೆಲ್ ಆದ್ರು ಸುಧಾರಾಣಿ ಪುತ್ರಿ ನಿಧಿ ಗೋವರ್ಧನ್

ಮಾಡೆಲ್ ಆದ್ರು ಸುಧಾರಾಣಿ ಪುತ್ರಿ ನಿಧಿ ಗೋವರ್ಧನ್
ಮುಂಬೈ , ಸೋಮವಾರ, 23 ಮೇ 2016 (19:14 IST)
ನಟಿ ಸುಧಾರಾಣಿ ಸ್ಯಾಂಡಲ್‌ವುಡ್ ನಲ್ಲಿ ಒಂದು ಕಾಲದಲ್ಲಿ ಬಹುವಾಗಿ ಮಿಂಚಿದ ನಟಿ. ಸುಧಾರಾಣಿ ಅವರು ತೆರೆ ಮೇಲೆ ಅಭಿನಯಿಸಿದ ಒಂದೊಂದು ಪಾತ್ರಗಳು ಇದಿಂಗೂ ಹಾಗೇ ನೆನಪಿನಲ್ಲಿ ಉಳಿಯುತ್ತವೆ. ಇದೀಗ ಸುಧಾರಾಣಿ ಅವರ ಹಾದಿಯಲ್ಲೇ ಮಗಳು ಕೂಡ ಸಾಗುತ್ತಿದ್ದಾಳೆ ಅನ್ನೋದಕ್ಕೆ ಸೂಚನೆಯೊಂದು ಸಿಕ್ಕಿದೆ. 
ಹೌದು ಸುಧಾರಾಣಿ ಪುತ್ರಿ ಸದ್ದಿಲ್ಲದೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.ಮೊನ್ನೆ ಮೈಸೂರಿನಲ್ಲಿ ನಡೆದ ಮಾಡೆಲಿಂಗ್ ಕಾರ್ಯಕ್ರಮವೊಂದರಲ್ಲಿ ನಿಧಿ ಇದೇ ಮೊದಲ ಬಾರಿಗೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ರು. ಇನ್ನು ಸುಧಾರಾಣಿ ಅವರ ಪುತ್ರಿಯ ರ್ಯಾಂಪ್ ವಾಕ್ ನೋಡಿದವರೆಲ್ಲಾ ಇವರು ಕೂಡ ಸುಧಾರಾಣಿ ರೀತಿ ನಟಿಯಾದ್ರೆ ಅಚ್ಚರಿಯಿಲ್ಲ ಅಂದ್ರಂತೆ. 
 
ಇನ್ನು ಮೊದಲ ಬಾರಿಗೆ ರ್ಯಾಂಪ್ ವಾಕ್ ಮಾಡಿದ್ರೂ ನಿಧಿ ಮಾತ್ರ ಸ್ವಲ್ಪಾನೂ ಭಯಪಡಲಿಲ್ಲವಂತೆ. ತುಂಬಾನೇ ಧೈರ್ಯವಾಗಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ನೆರೆದಿದ್ದವರಿಂದ ಶಹಬ್ಬಾಸ್ ಗಿರಿ ಪಡೆದುಕೊಂಡ್ರಂತೆ.
 
ಇನ್ನು ಮಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದನ್ನು ನೋಡಿ ಸುಧಾರಾಣಿಯಂತೂ ಫುಲ್ ಖುಷಿಯಾಗಿದ್ರಂತೆ. ತನ್ನ ಮೊದಲ ರ್ಯಾಂಪ್ ವಾಕ್ ನಿಂದಲೇ ಪ್ರಶಂಸೆ ಗಿಟ್ಟಿಸಿಕೊಂಡಿರುವ ನಿಧಿ ಗೋವರ್ಧನ್ ಮುಂದೆ ಮಾಡೆಲಿಂಗ್ ಕ್ಷೇತ್ರದಲ್ಲಿ ಇನ್ನಷ್ಟು ಹೆಸರು ಮಾಡಲಿ ಅಂತಾ ನಾವು ಕೂಡ ಹಾರೈಸೋಣ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್ ಕುಮಾರ್ ಅವರ ಕೈಯಲ್ಲಿ ಸದ್ಯವಿರುವ ಸಿನಿಮಾಗಳೆಷ್ಟು?