Select Your Language

Notifications

webdunia
webdunia
webdunia
webdunia

ರನ್ ಆಂಟೋನಿ ಸಿನಿಮಾ ಜುಲೈ 1ಕ್ಕೆ ರಿಲೀಸ್

ರನ್ ಆಂಟೋನಿ ಸಿನಿಮಾ ಜುಲೈ 1ಕ್ಕೆ ರಿಲೀಸ್
ಬೆಂಗಳೂರು , ಗುರುವಾರ, 9 ಜೂನ್ 2016 (10:53 IST)
ತನ್ನ ಮೊದಲ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಭರವಸೆ ಮೂಡಿಸಿದ ರಾಜ್ ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಅವರು ಅಭಿನಯಿಸುತ್ತಿರುವ ಎರಡನೇ ಸಿನಿಮಾ ರನ್ ಆಂಟೋನಿ. ಈಗಾಗಲೇ ನಾನಾ ಕಾರಣಗಳಿಂದ ಸುದ್ದಿಗೆ ಗ್ರಾಸವಾಗಿರುವ ಈ ಸಿನಿಮಾ ಇದೀಗ ಪ್ರೇಕ್ಷಕರೆದುರಿಗೆ ಬರೋದಕ್ಕೆ ರೆಡಿಯಾಗಿದೆ.

ಟ್ರೇಲರ್ ಮೂಲಕ ಸದ್ದು ಮಾಡಿರುವ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ.ಅಂದ್ಹಾಗೆ ರನ್ ಆಂಟೋನಿ ಸಿನಿಮಾ ಒಂದು ಹೊಸ ಬಗೆಯ ಸಿನಿಮಾವಂತೆ. ಇದುವರೆಗೂ ಸ್ಯಾಂಡಲ್ ವುಡ್ ನಲ್ಲಿ ಈ ರೀತಿಯ ಸಿನಿಮಾನೇ ಬಂದಿಲ್ಲವಂತೆ. ರನ್ ರೋಮ್ಯಾಂಟಿಕ್ ಥ್ರಿಲ್ಲರ್ ಕಥೆಯಾಧಾರಿತ ಸಿನಿಮಾವಿದು .ಸಿನಿಮಾದಲ್ಲಿ ಹಾಡೊಂದನ್ನು ವಿನಯ್ ರಾಜ್ ಕುಮಾರ್ ಅವರ ಚಿಕ್ಕಪ್ಪ ಪುನೀತ್ ರಾಜ್ ಕುಮಾರ್ ಅವರು ಹಾಡಿದ್ದಾರೆ. 

ಈಗಾಗಲೇ ಹಾಡುಗಳಿಂದ ಸುದ್ದಿ ಮಾಡಿರುವ ಈ ಸಿನಿಮಾವನ್ನು ಯಾವಾಗ ನೋಡುತ್ತೇವೆ ಅಂತಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಸಿನಿಮಾ ತಂಡಸ ಮುಂದಿನ ತಿಂಗಳು ಅಂದ್ರೆ ಜುಲೈ 1 ರಂದು ಸಿನಿಮಾವ್ನು ರಿಲೀಸ್ ಮಾಡುತ್ತೇವೆ ಅಂತಾ ಹೇಳಿದೆ.
 
ರನ್ ಆಂಟೋನಿ ಸಿನಿಮಾವನ್ನು  ರಘು ಶಾಸ್ತ್ರಿ ಅವರು ನಿರ್ದೇಶನ ಮಾಡಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಅವರಿಗೆ ನಾಯಕಿಯರಾಗಿ ರುಕ್ಶರ್ ಮಿರ್ ಹಾಗೂ ಸುಶ್ಮಿತಾ ಜೋಷಿ ಅವರು ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ರನ್ ಆಂಟೋನಿ ಸಿನಿಮಾ ಸೆಟ್ಟೇರಿತ್ತು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆಂದು ಹೇಳಿಲ್ಲ-ಹರ್ಷಿಕಾ ಪೂಣಚ್ಚ