Select Your Language

Notifications

webdunia
webdunia
webdunia
webdunia

ನಾನು ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆಂದು ಹೇಳಿಲ್ಲ-ಹರ್ಷಿಕಾ ಪೂಣಚ್ಚ

ನಾನು ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆಂದು ಹೇಳಿಲ್ಲ-ಹರ್ಷಿಕಾ ಪೂಣಚ್ಚ
ಬೆಂಗಳೂರು , ಗುರುವಾರ, 9 ಜೂನ್ 2016 (10:49 IST)
ಕೆಲ ಸಮಯದ ಹಿಂದೆ ನಟಿ ಹರ್ಷಿಕಾ ಪೂಣಚ್ಚ ಫೋಟೋ ಶೂಟ್ ಒಂದನ್ನು ಮಾಡಿದ್ದರು.ಅಲ್ಲದೇ ನನಗೆ ಬಾಲಿವುಡ್ ಸಿನಿಮಾವೊಂದರಲ್ಲಿ ಅಭಿನಯೋದಕ್ಕೆ ಅವಕಾಶ ಸಿಕ್ಕಿದೆ ಅದ್ಕಕಾಗಿ ನಾನು ಫೋಟೋ ಶೂಟ್ ಮಾಡುತ್ತಿದ್ದೇನೆ. ಶೀಘ್ರದಲ್ಲೇ ಆ ಬಾಲಿವುಡ್ ಸಿನಿಮಾ ಯಾವುದು ಅನ್ನೋದನ್ನು ನಿಮಗೆಲ್ಲಾ ಹೇಳುತ್ತೇನೆ ಅಂತಾ ಹೇಳಿದ್ದರು. ಹೀಗ ಬಾರಿ ಬಾರಿ ಡೈಲಾಗ್ ಹೊಡೆದಿದ್ದ ಹರ್ಷಿಕಾ ಪೂಣಚ್ಚ ಇದೀಗ ತಮ್ಮ ಡೈಲಾಗನ್ನೇ ಬದಲಿಸಿದ್ದಾರೆ.

ಮೊನ್ನೆ ಮೊನ್ನೆ  ಐ ಆಮ್ ಡೂಯಿಂಗ್ ಬಾಲಿವುಡ್ ಸಿನಿಮಾ ಯು ನೋ ಅಂತಾ ಬಡಾಯಿ ಕೊಚ್ಚಿಕೊಂಡಿದ್ದ ಹರ್ಷಿಕಾ ಮೇಡಮ್ ಇದೀಗ ತಮ್ಮ ಮಾತುಗಳನ್ನುಬದಲಿಸಿ ಬಿಟ್ಟಿದ್ದಾರೆ. ಇನ್ನೇನು ಬಾಲಿವುಡ್ ನಲ್ಲಿ ನಾನೇ ನಂಬರ್ ನಟಿ ಅನ್ನೋ ಮಟ್ಟಿಗೆ ಬಿಲ್ಡಪ್ ನೀಡಿದ್ದ ನಟಿ ಹರ್ಷಿಕಾ ಇದೀಗ ನಾನು ಆ ರೀತಿ ಮಾತೇ ಆಡಿಲ್ಲ ಅಂತಿದ್ದಾರೆ. ಅಲ್ಲದೇ ನಾನು ಬಾಲಿವುಡ್ ಸಿನಿಮಾಗಳನ್ನು ಮಾಡುತ್ತೇನೆ ಅಂತಾ ಹೇಳಲೇ ಇಲ್ಲ ಎಂದಿದ್ದಾರ

ನಾನು ಸುಮ್ಮನೆ ಮೇಕ್ ಒವರ್ ಗಾಗಿ ಫೋಟೋ ಶೂಟ್ ಮಾಡಿಸಿದ್ದೆ.ಆದ್ರೆ ಜನರು ಅದನ್ನೇ ನಾನು ಬಾಲಿವುಡ್ ಸಿನಿಮಾಗಾಗಿ ಮಾಡಿಕೊಂಡಿದ್ದೇನೆ ಅಂತಾ ಸುದ್ದಿ ಹಬ್ಬಿಸಿದ್ದಾರೆ ಅಂತಾ ಅವರು ಹೇಳಿದ್ದಾರೆ.ನಾನು ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ. ನನಗೆ ಅನೇಕ ಆಫರ್ ಗಳು ಬಂದಿರೋದು ನಿಜ.ಆದ್ರೆ ಬೇರೆ ಬೇರೆ ಕಾರಣಗಳಿಗೆ ನಾನು ಅದನ್ನು ನಿರಾಕರಿಸಿದ್ದೇನೆ ಅಂತಾ ಅವರು ಹೇಳಿದ್ದಾರೆ.
 
ಇನ್ನು ಈ ಹಿಂದೆ ಬಿಲ್ಡಪ್ ಕೊಟ್ಟ ಹರ್ಷಿಕಾ ಅದ್ಯಾಕೆ ಈಗ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಬಾಲಿವುಡ್ ನಲ್ಲಿ ಮಿಂಚ್ತೀನಿ ಅಂತಿದ್ದ ಈಕೆ ಇದೀಗ ತನ್ನ ವರಸೆ ಬದಲಿಸಿದ್ದಾರೆ. ನಾನು ಕನ್ನಡದಲ್ಲೇ ಉತ್ತಮ ಅವಕಾಶವನ್ನು ಪಡೆದುಕೊಳ್ಳುತ್ತೇನೆ ಅಂತಾ ಹೇಳಿದ್ದಾರೆ.ಆದರೆ ಇದು ಕೂಡ ಎಷ್ಟು ನಿಜ ಅನ್ನೋದನ್ನು ಕಾದು ನೋಡ್ಬೇಕು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿ ಏನ್ ಮಾಡ್ತಿದ್ದರು ನಟಿ ಕೃತಿ ಕರಬಂಧ