Select Your Language

Notifications

webdunia
webdunia
webdunia
webdunia

ಟ್ರಾಫಿಕ್ ಚಿತ್ರದಲ್ಲಿ ದಿವ್ಯಾ ದತ್ತ ನಟನೆ

ಟ್ರಾಫಿಕ್ ಚಿತ್ರದಲ್ಲಿ ದಿವ್ಯಾ ದತ್ತ ನಟನೆ
ಮುಂಬೈ , ಸೋಮವಾರ, 2 ಮೇ 2016 (15:56 IST)
ಬಾಲಿವುಡ್ ನಟಿ ದಿವ್ಯಾ ದತ್ತ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಅವರ ಮುಂದಿನ ಚಿತ್ರ 'ಟ್ರಾಫಿಕ್' ಚಿತ್ರ ಮಾತ್ರ ಅವರನ್ನು ಎಮೋಷನಲ್ ಆಗಿ ಮಾಡಿದೆಯಂತೆ... 
ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ರಾಜೇಶ್ ಪಿಳ್ಳೆ... 2011ರಲ್ಲಿ ತೆರೆಕಂಡ ಮಲೆಯಾಳಂ ಚಿತ್ರದ ರಿಮೇಕ್ ಅಂತ ಹೇಳಲಾಗ್ತಿದೆ... 12 ವರ್ಷದ ಮಗುವಿನ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ ದಿವ್ಯಾ.....
 
ಅದಲ್ಲದೇ ಚಿತ್ರದಲ್ಲಿನ ಕೆಲ ಪಾತ್ರಗಳಿಗೆ ಎಮೋಷನಲ್ ಆಗಿದ್ದೇನೆ ಎಂದಿದ್ದಾರೆ ದಿವ್ಯಾ ದತ್ತ... ಆಸ್ಪತ್ರೆಯಲ್ಲಿ ಶೂಟಿಂಗ್ ನಡೆಸಲಾಗಿತ್ತು.. ನಾನು ಗ್ಲಿಸರಿನ್‌ ಅನ್ನು ಬಳಕೆ ಮಾಡಲ್ಲ.. ಆದರೆ ಅಳುವ ದೃಶ್ಯಗಳಿಗಾಗಿ ರಿಯಲ್ ಆಗಿಯೇ ಅತ್ತಿದ್ದೇನೆ. ಮಗುವನನ್ನು ಕಳೆದುಕೊಂಡ ಒಬ್ಬ ತಾಯಿಯ ನೋವು ಏನೆಂಬುದು ನನಗೆ ಗೊತ್ತು ಎಂದು ದಿವ್ಯಾ ತಿಳಿಸಿದರು. 
 
ಬಾಘ್ ಮಿಲ್ಕಾ ಬಾಘ್ ಚಿತ್ರ ರಿಮೇಕ್‌ ಚಿತ್ರದ ಶೂಟಿಂಗ್‌ನ್ನು ಇಷ್ಟಪಟ್ಟಿದ್ದಾರಂತೆ. ಅದಲ್ಲದೇ ದಿವ್ಯಾ ಅಲಿಗಢ್, ಹಾಗೂ ವಿರ್ ಜರಾ ಹಾಗೂ ಸ್ಪೆಷಲ್ 26 ಚಿತ್ರಗಳಲ್ಲಿ ನಟಿಸಿದ್ದಾರೆ. ಮನೋಜ್ ಬಾಜ್ಪೇಯಿ ಉತ್ತಮ ಕೋಸ್ಟಾರ್ ಎಂದು ತಿಳಿಸಿದ್ದಾರೆ ದಿವ್ಯಾ... 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಡೈವೋರ್ಸ್ ಬಳಿಕ ಒಂದಾಗಿ ಕಾಣಿಸಿಕೊಂಡ ಸುಸೇನ್-ಹೃತಿಕ್