Select Your Language

Notifications

webdunia
webdunia
webdunia
webdunia

ಅವರ ಮಗ ಹೆಸರು ಏನಾದ್ರೂ ಇಟ್ಕೊತಾರೆ...ನಿಮಗೇನು?

ಅವರ ಮಗ ಹೆಸರು ಏನಾದ್ರೂ ಇಟ್ಕೊತಾರೆ...ನಿಮಗೇನು?
Mumbai , ಶುಕ್ರವಾರ, 23 ಡಿಸೆಂಬರ್ 2016 (11:04 IST)
ಬಾಲಿವುಡ್ ಜೋಡಿ ಸೈಫ್ ಆಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ ಮಗೂಗೆ ತೈಮೂರ್ ಅಲಿಖಾನ್ ಪಟೌಡಿ ಎಂದು ಹೆಸರಿಟ್ಟಿರುವುದು ಗೊತ್ತಿರುವ ಸಂಗತಿ. ಆದರೆ ಈ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 
 
ಕೆಲವರಂತು ಮಗೂಗೆ ಈ ಹೆಸರು ಯಾಕಿಟ್ಟಿದ್ದೀರಿ ತಿಳಿಸಬೇಕೆಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇಲ್ಲದಿಲ್ಲ. ತೈಮೂರ್ ಅನ್ನೋ ಹೆಸರಿನ ಮಂಗೋಲ್ ರಾಜ 14ನೇ ಶತಮಾನದಲ್ಲಿ ಭಾರತ ಮೇಲೆ ದಂಡೆತ್ತಿ ಬಂದಿದ್ದ. ದೆಹಲಿ ಮೇಲೆ ದಾಳಿ ಮಾಡಿ ನೂರಾರು ಮಂದಿಯನ್ನು ಸಾಯಿಸಿದ್ದ. ಈಗ ವಿವಾದಕ್ಕೆ ಕಾರಣವಾಗಿರುವುದು ಇದೇ ಹೆಸರು.
 
ಇಷ್ಟಕ್ಕೂ ತೈಮೂರ್ ಅಂದರೆ ಉಕ್ಕಿನ ಮನುಷ್ಯ, ಧೈರ್ಯಶಾಲಿ ರಾಜ ಎಂಬ ಅರ್ಥ ಇದೆಯಂತೆ. ಆದರೆ ನೆಟ್ಟಿಗರು ಕಾಮೆಂಟ್ ಮಾಡುತ್ತಿರುವ ಬಗ್ಗೆ ಕರೀನಾ ಕಪೂರ್ ಚಿಕ್ಕಪ್ಪ ರಿಷಿ ಕಪೂರ್ ಟ್ವಿಟ್ಟರ್ ಮೂಲಕ ಗರಂ ಉತ್ತರ ಕೊಟ್ಟಿದ್ದಾರೆ. ಈ ಹಿಂದೆ ದೇಶವನ್ನು ಆಕ್ರಮಿಸಿದ ವ್ಯಕ್ತಿ ಹೆಸರನ್ನು ಈಗ ಮಗುವಿಗೆ ಹೋಲಿಸುತ್ತಿರುವ ಬಗ್ಗೆ ಅವರು ಅಸಹನೆ ವ್ಯಕ್ತಪಡಿಸಿದ್ದಾರೆ.
 
”ತಂದೆ ತಾಯಿ ತಮ್ಮ ಮಕ್ಕಳಿಗೆ ಹೆಸರಿಡಬೇಕೆಂದರೆ ಜನ ಯಾಕಿಷ್ಟು ನೋವನುಭವಿಸುತ್ತಿದ್ದಾರೋ ಗೊತ್ತಾಗುತ್ತಿಲ್ಲ. ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಮಕ್ಕಳಿಗೆ ಏನು ಹೆಸರಿಡಬೇಕು ಎಂಬುದು ತಂದೆತಾಯಿ ಇಷ್ಟ" ಎಂದಿದ್ದಾರೆ. ಕಾಮೆಂಟ್ ಮಾಡಕ್ಕೆ ನೀವ್ಯಾರು? ನಿಮ್ಮ ಮಕ್ಕಳ ಹೆಸರನ್ನೇನಾದ್ರೂ ಇಟ್ಟಿದ್ದೀವಾ? ಜಾಸ್ತಿ ಕಾಮೆಂಟ್ ಮಾಡಿದರೆ ಟ್ವಿಟ್ಟರ್‌ನಲ್ಲಿ ಬ್ಲ್ಯಾಕ್ ಆಗೋಗ್ತೀರಾ ಎಂದು ರಿಷಿ ಕಪೂರ್ ಕಿಡಿಕಾರಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇತಿಹಾಸ ಸೃಷ್ಟಿಸಿದ ರಾಗಿಣಿ ದ್ವಿವೇದಿ ’ಕಿಚ್ಚು’