Select Your Language

Notifications

webdunia
webdunia
webdunia
webdunia

ಅಮೀರ್ ಖಾನ್ ಕಣ್ಣಲ್ಲಿ ನೀರು ತರಿಸಿದ ನಟಿ ರೇಖಾ

ಅಮೀರ್ ಖಾನ್ ಕಣ್ಣಲ್ಲಿ ನೀರು ತರಿಸಿದ ನಟಿ ರೇಖಾ
Mumbai , ಶುಕ್ರವಾರ, 17 ಫೆಬ್ರವರಿ 2017 (11:27 IST)
ಒಂದು ಕಾಲದ ನಟಿ ರೇಖಾ ಬರೆದಿರುವ ಪತ್ರ ಬಾಲಿವುಡ್‌ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಕಣ್ಣಲ್ಲಿ ನೀರು ತರಿಸಿದೆ. ಅಮೀರ್ ಅಭಿನಯದ ದಂಗಲ್ ಚಿತ್ರ ಬಾಕ್ಸ್ ಆಫೀಸಲ್ಲಿ ಒಳ್ಳೆಯ ಗಳಿಕೆ ಮಾಡುವುದರ ಜತೆಗೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಚಿತ್ರತಂಡ ವಿಜಯೋತ್ಸವ ಆಚರಿಸಿಕೊಂಡಿದೆ.
 
ಈ ಕಾರ್ಯಕ್ರಮಕ್ಕೆ ಹಾಜರಾದ ನಟಿ ರೇಖಾ ಅವರು ದಂಗಲ್ ಸಿನಿಮಾದಲ್ಲಿನ ಅಮೀರ್ ಅಭಿನಯವನ್ನು ಹೊಗಳಿ ಅವರ ಕೈಗೊಂದು ಪತ್ರ ಕೊಟ್ಟಿದ್ದಾರೆ. ಅದನ್ನು ಬಿಚ್ಚಿ ಅಮೀರ್ ಖಾನ್ ಓದುತ್ತಾ ಇದ್ದಂತೆ ಕಣ್ತುಂಬಿ ಬಂದಿದೆ. ಆ ಪತ್ರ ನನಗೆ ತುಂಬಾ ಆತ್ಮೀಯವಾಗಿತ್ತು. ಅದನ್ನು ಎಂದಿಗೂ ನನ್ನೊಂದಿಗೆ ಇಟ್ಟುಕೊಳ್ಳುತ್ತೇನೆ ಎಂದು ಅಮೀರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
 
ಈ ಹಿಂದೆಯೂ ಅಮೀರ್ ಖಾನ್ ಸಾಕಷ್ಟು ಸಲ ಕಣ್ಣೀರಾಗಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್‍ಜಾನ್ ಚಿತ್ರದ ಸಂದರ್ಭದಲ್ಲಿ, ಮಾರಾಠಿಯ ಸೈರಾಟ್ ಚಿತ್ರ ಬಿಡುಗಡೆ ವೇಳೆ ಸಹ ಕಣ್ಣೀರಾಕಿದ್ದರು. ಮೂಲಗಳ ಪ್ರಕಾರ ದಂಗಲ್ ಸಿನಿಮಾ ಇದುವರೆಗೆ ರೂ.400 ಕೋಟಿ ಕಲೆಕ್ಷನ್ ಮಾಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸಿಗೆ ಮೇಲೆ ಅರೆನಗ್ನಳಾಗಿ ವಿಷಸ್ ಹೇಳಿದ ಚೆಲುವೆ