Select Your Language

Notifications

webdunia
webdunia
webdunia
webdunia

ಮಹಿಳೆಗೆ ಅಶ್ಲೀಲ ಚಿತ್ರ ರವಾನೆ: ಬಾಲಿವುಡ್ ನಟ ಎಜಾಜ್ ಖಾನ್‌ಗೆ ಜಾಮೀನು

ಎಜಾಜ್ ಖಾನ್
ಮುಂಬೈ , ಸೋಮವಾರ, 21 ನವೆಂಬರ್ 2016 (13:52 IST)
ಮಹಿಳೆಯೊಬ್ಬರಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದ ಬಾಲಿವುಡ್ ಎಜಾಜ್ ಖಾನ್‌‌ನನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
 
ಬಿಗ್‌ಬಾಸ್ 7 ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದಲ್ಲದೇ ಕೆಲ ಬಾಲಿವುಡ್ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಖಾನ್, ನಾನು ಸೆಲೆಬ್ರೆಟಿಯಾಗಿದ್ದರಿಂದ ನನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. 
 
ಬ್ಯೂಟಿ ಪಾರ್ಲರ್ ನಡೆಸುತ್ತಿರುವ 38 ವರ್ಷ ವಯಸ್ಸಿನ ವಿಚ್ಚೇದಿತ ಮಹಿಳೆಯಾಗಿರುವ ಮಾಲ್ವಾನಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ಖಾನ್ ನನಗೆ ಫ್ರೆಂಡ್‌ಶಿಪ್ ರಿಕ್ವೆಸ್ಟ್ ಕಳುಹಿಸಿದ್ದರು, ನಾನು ಅದನ್ನು ಸ್ವೀಕರಿಸಿದ ನಂತರ ಇಬ್ಬರು ಚಾಟ್ ಮಾಡುತ್ತಿದ್ದೇವು, ಕೆಲ ದಿನಗಳ ನಂತರ ಪರಸ್ಪರರು ಮೊಬೈಲ್ ಮೂಲಕವೂ ಮಾತುಕತೆ ನಡೆಯುತ್ತಿತ್ತು ಎಂದು ತಿಳಿಸಿದ್ದಾರೆ.
 
ಆದರೆ, ಕೆಲ ದಿನಗಳ ನಂತರ ಅಶ್ಲೀಲ ಚಿತ್ರವೊಂದನ್ನು ನನ್ನ ಮೊಬೈಲ್‌ಗೆ ರವಾನಿಸಿದ. ನಾನು ಕೂಡಲೇ ಖಾನ್‌ಗೆ ಕರೆ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದ್ದರಿಂದ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಮಾಲ್ವಾನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾಗೆ ಎಂಟ್ರಿ?