Select Your Language

Notifications

webdunia
webdunia
webdunia
webdunia

ಹಾಯಿ ಹಾಯಿರೋ ಬೆಡಗಿ ರವೀನಾ ಟಂಡನ್‌ಗೆ ಏನಾಗಿದೆ?

ಹಾಯಿ ಹಾಯಿರೋ ಬೆಡಗಿ ರವೀನಾ ಟಂಡನ್‌ಗೆ ಏನಾಗಿದೆ?
Mumbai , ಶನಿವಾರ, 14 ಜನವರಿ 2017 (10:12 IST)
ಒಂದು ಕಾಲದಲ್ಲಿ ಬಾಲಿವುಡ್ ಹೀರೋಯಿನ್ ಆಗಿ ಮೆರೆದ ಬೆಡಗಿ ರವೀನಾ ಟಂಡನ್. ಮದುವೆಯಾದ ಬಳಿಕ ಸಿನಿಮಾಗಳಿಂದ ದೂರ ಉಳಿದರು. ಈಗ ಮಾಟ್ರ್-ದಿ ಮದರ್ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ರವೀನಾ ತಾಯಿಯಾಗಿ ಕಾಣಿಸಲಿದ್ದಾರೆ.
 
ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರ ಪರ ಹೋರಾಡುವ ಸ್ತ್ರೀ ಪಾತ್ರದಲ್ಲಿ ರವೀನಾ ಕಾಣಿಸಲಿದ್ದಾರಂತೆ. ಇತ್ತೀಚೆಗೆ ಈ ಸಿನಿಮಾಗೆ ಸಂಬಂಧಿಸಿದ ಒಂದು ಫೋಟೋ ಬಿಡುಗಡೆಯಾಗಿದೆ. ಕೆದರಿದ ಕೂದಲು, ರಕ್ತಸಿಕ್ತವಾದ ಮುಖದೊಂದಿಗೆ ಕಾಣಿಸಿದ್ದಾರೆ ರವೀನಾ ಟಂಡನ್. 
 
ಸ್ಲಂ ಡಾಗ್ ಮಿಲಿಯನೇರ್ ಖ್ಯಾತಿಯ ಮಧುರ್ ಮಿಟ್ಟಲ್ ಈ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಅಷ್ತರ್ ಸಯೀದ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದಾಗಿದೆ. ಈ ಚಿತ್ರದ ಪ್ರತಿ ಸನ್ನಿವೇಶವೂ ಕುತೂಹಲಭರಿತವಾಗಿರಲಿದ್ದು, ಅಭಿಮಾನಿಗಳಿಗೆ ಖಂಡಿತ ಇಷ್ಟವಾಗುತ್ತದೆ ಎಂಬ ವಿಶ್ವಾಸದಲ್ಲಿ ಚಿತ್ರತಂಡವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ವರ್ಷಗಳ ಬಳಿಕ ರಾಣಿ ಮುಖರ್ಜಿ ಪ್ರತ್ಯಕ್ಷ