Webdunia - Bharat's app for daily news and videos

Install App

ಸೌತ್, ಬಾಲಿವುಡ್ ಎನ್ನಬೇಡಿ: ರಶ್ಮಿಕಾ ಮಂದಣ್ಣ ಖಡಕ್ ಮಾತು

Krishnaveni K
ಬುಧವಾರ, 6 ಮಾರ್ಚ್ 2024 (10:03 IST)
Photo Courtesy: Twitter
ಮುಂಬೈ: ಸೌತ್ ಸಿನಿಮಾ, ಬಾಲಿವುಡ್ ಎಂದು ಪ್ರತ್ಯೇಕ ಮಾಡುವವರಿಗೆ ನಟಿ ರಶ್ಮಿಕಾ ಮಂದಣ್ಣ ಸಖತ್ ಆಗಿ ಉತ್ತರ ಕೊಟ್ಟಿದ್ದಾರೆ. ಸೌತ್ ಸಿನಿಮಾ, ಬಾಲಿವುಡ್ ಸಿನಿಮಾ ಎನ್ನುವ ಬದಲು ಭಾರತೀಯ ಚಿತ್ರರಂಗ ಎನ್ನಿ ಎಂದಿದ್ದಾರೆ.

ಕನ್ನಡದಲ್ಲಿ ಮೊದಲು ಬಣ್ಣ ಹಚ್ಚಿ ಬಳಿಕ ಟಾಲಿವುಡ್ ನಲ್ಲಿ ಮಿಂಚಿ ಇದೀಗ ಬಾಲಿವುಡ್ ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ರಶ್ಮಿಕಾ ದಕ್ಷಿಣದ ಸಿನಿಮಾಗಳು, ಬಾಲಿವುಡ್ ಸಿನಿಮಾ ಎಂದು ಪ್ರತ್ಯೇಕ ಮಾಡುವವರಿಗೆ ಸಂದರ್ಶನವೊಂದರಲ್ಲಿ ಖಡಕ್ ಉತ್ತರ ಕೊಟ್ಟಿದ್ದಾರೆ.

‘ನಾವೆಲ್ಲರೂ ಇರುವುದು ಮನರಂಜನಾ ವೃತ್ತಿಯಲ್ಲಿ. ನಾವೆಲ್ಲರೂ ಒಂದೇ ದೇಶದವರಾಗಿದ್ದೇವೆ. ಹೀಗಾಗಿ ನಮ್ಮ ಚಿತ್ರರಂಗವನ್ನು ಭಾರತೀಯ ಚಿತ್ರರಂಗ ಎನ್ನುವ ಸಮಯ ಬಂದಿದೆ. ನಮ್ಮ ದೇಶದಲ್ಲಿ ಇರುವ ಚಿತ್ರೋದ್ಯಮವವೆಲ್ಲವೂ ಒಂದೇ ಆಗಿದೆ. ನಾವೆಲ್ಲರೂ ಸಿನಿಮಾ ಎಂಬ ಗುರಿ ತಲುಪಲು ಕೆಲಸ ಮಾಡುತ್ತೇವೆ. ಈಗ ಯಾವುದೇ ಅಡೆತಡೆಗಳು ಇಲ್ಲದೇ ಎಲ್ಲರೂ ಬೇರೆ ಬೇರೆ ಭಾಷೆಗಳಲ್ಲಿ ಅವಕಾಶ ಸಿಕ್ಕಾಗ ನಟಿಸಲು ಸಾಧ‍್ಯವಾಗುತ್ತಿದೆ ಎನ್ನುವುದೇ ಖುಷಿ ವಿಚಾರ. ನಾನೂ ಈ ಬದಲಾವಣೆಯ ಭಾಗವಾಗಿದ್ದೇನೆ ಎನ್ನುವುದು ನನಗೆ ಖುಷಿ ಕೊಡುವ ವಿಚಾರ’ ಎಂದಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ ರಶ್ಮಿಕಾ ಇದೀಗ ತೆಲುಗು ಮೂಲದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 ರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕೆ ಮೊದಲು ಅವರು ನಾಯಕಿಯಾಗಿ ನಟಿಸಿದ್ದ ಬಾಲಿವುಡ್ ನ ಅನಿಮಲ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತು. ಇದಲ್ಲದೆ ತಮಿಳಿನಲ್ಲಿ ಧನುಷ್  ಜೊತೆ ಒಂದು ಸಿನಿಮಾ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

ಮುಂದಿನ ಸುದ್ದಿ
Show comments