Select Your Language

Notifications

webdunia
webdunia
webdunia
webdunia

ದೀಪಿಕಾ ಜತೆಗಿನ ಮದುವೆ ವದಂತಿ ಕುರಿತು ರಣಬೀರ್ ಪ್ರತಿಕ್ರಿಯೆ

ದೀಪಿಕಾ ಜತೆಗಿನ ಮದುವೆ ವದಂತಿ ಕುರಿತು ರಣಬೀರ್ ಪ್ರತಿಕ್ರಿಯೆ
ಮುಂಬೈ , ಶುಕ್ರವಾರ, 22 ಜುಲೈ 2016 (17:52 IST)
ರಣಬೀರ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ? ಮದುವೆಯಾಗ್ತಾರೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ರಣಬೀರ್ ಸಿಂಗ್ ಮೌನ ಮುರಿದಿದ್ದಾರೆ. ಬಾಲಿವುಡ್‌ನ ಲವ್ ಬರ್ಡ್ಸ್ ಅಂತಲೇ ಹೇಳಲ್ಪಡುವ ಡಿಪ್ಪಿ ಹಾಗೂ ರಣಬೀರ್ ತಮ್ಮ ಮದುವೆ ವಿಷಯದಲ್ಲಿ ಮಾತ್ರ ಮೌನವಾಗಿದ್ದಾರೆ. 
ಕಳೆದ ರಾತ್ರಿ 'ಮಂದಾರಿ' ಚಿತ್ರ ವೀಕ್ಷಿಸಲು ಜತೆ ಜತೆಯಾಗಿ ಬಂದ ರಣಬೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ, ಈ ವೇಳೆ ಎಂಗೇಜ್‌ಮೆಂಟ್ ವಿಷಯಕ್ಕೆ ಸಂಬಂಧಪಟ್ಟಂತೆ ರಣಬೀರ್ ಅವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದ್ದರು.

ಈ ವೇಳೆ ದೀಪಿಕಾ ಅವರನ್ನು ಮುಂದಕ್ಕೆ ನಡೆಯುವಂತೆ ರಣಬೀರ್ ತಿಳಿಸಿದ್ದಾರೆ. ಮಾಧ್ಯಮದವರು ಕೇಳಲಾದ ಪ್ರಶ್ನೆಗೆ ಸಿಟ್ಟಾಗಿದ್ದ ರಣಬೀರ್, ಅನುಪಯುಕ್ತ ಪ್ರಶ್ನೆಗಳನ್ನು ಕೇಳಬೇಡಿ ಎಂದು ಹೇಳಿ ರಣಬೀರ್, ಯಾವುದೇ ಪ್ರತಿಕ್ರಿಯೆ ನೀಡದೇ ಮುಂದಕ್ಕೆ ನಡೆದಿದ್ದಾರೆ. 

ತನ್ನ ವೃತ್ತಿ ಜವಾಬ್ದಾರಿಗಳಲ್ಲಿ ಬ್ಯೂಸಿ ಇರುವ ಡಿಪ್ಪಿ ಇತ್ತೀಚೆಗೆ ಅವರು ತನ್ನ ಬಾಯ್‌ಫ್ರೆಂಡ್ ರಣಬೀರ್ ಸಿಂಗ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿ ಎಲ್ಲೆಡೆ ಕೇಳಿ ಬರುತ್ತಿತ್ತು. ತನ್ನ ಎಂಗೇಜ್‌ಮೆಂಟ್ ಕುರಿತು ದೀಪಿಕಾ ಮೌನ ಮುರಿದಿದ್ದರು. 
 
'ನಾನು ಗರ್ಭಿಣಿಯಾಗಿಲ್ಲ, ನನ್ನ ಮದುವೆಯಾಗಿಲ್ಲ, ನನ್ನ ಎಂಗೇಜ್‌ಮೆಂಟ್ ಆಗಿಲ್ಲ, ನನ್ನ ಮದುವೆ ಬಗ್ಗೆ ನಾನು ಯಾವುದೇ ಪ್ಲ್ಯಾನ್ ಮಾಡಿಲ್ಲ ಎಂದು ದೀಪಿಕಾ ತಿಳಿಸಿದ್ದಾರೆ.'ಇದೊಂದು ಒಳ್ಳೆಯ ಅವಕಾಶ ನನಗೆ ದೊರೆತಿದೆ. ಈ ವೇಳೆ ನಾನು ಸ್ಪಷ್ಟನೆ ನೀಡುತ್ತಿರುವುದಕ್ಕೆ ದೊರಕಿರುವ ಅವಕಾಶದಿಂದ ಸಂತಸನಾಗಿರುವೆ, ಮದುವೆ ಕುರಿತು ಯಾವ ಪ್ಲ್ಯಾನ್ ಇಲ್ಲ ಎಂದು ದೀಪಿಕಾ ಹೇಳಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಕಾಬಿಲ್' ಚಿತ್ರದ ಸ್ಪೆಷಲ್ ಸಾಂಗ್ ನಟಿಸುವುದು ಖಚಿತವಾಗಿಲ್ಲ- ಸನ್ನಿ ಲಿಯೋನ್