ರಣವೀರ್ ಸಿಂಗ್ ಹುಚ್ಚಾಟಕ್ಕೆ ಅಭಿಮಾನಿಗೆ ಗಾಯ

ಬುಧವಾರ, 6 ಫೆಬ್ರವರಿ 2019 (09:21 IST)
ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿಮಾನಿಗಳ ಗುಂಪಿನ ಮೇಲೆ ಹಾರಿ ಸಾಹಸ ಮಾಡಲು ಹೋಗಿ ಅಭಿಮಾನಿಗೆ ಗಾಯ ಮಾಡಿದ್ದಾರೆ.


ಮುಂಬೈಯಲ್ಲಿ ನಡೆದ ಲಾಕ್ಮೆ ಫ್ಯಾಶನ್ ವೀಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಣವೀರ್ ನನ್ನು ನೋಡಲು ಅಭಿಮಾನಿಗಳ ದಂಡೇ ಹರಿದುಬಂದಿತ್ತು. ಅಭಿಮಾನಿಗಳ ಗುಂಪು ತಮ್ಮನ್ನು ಕೂಗುತ್ತಿರುವುದನ್ನು ನೋಡಿ ಉದ್ವೇಗಕ್ಕೊಳಗಾದ ರಣವೀರ್ ಉತ್ಸಾಹದಿಂದ ಅವರ ಮೇಲೆ ಹಾರಿದ್ದರು.

ರಣವೀರ್ ಏನೋ ನೆಲಕ್ಕೆ ಬೀಳದೇ ಅಭಿಮಾನಿಗಳ ತೆಕ್ಕೆಯಲ್ಲಿ ಸುರಕ್ಷಿತವಾಗಿದ್ದರು. ಆದರೆ ಅವರನ್ನು ಹಿಡಿದ ಅಭಿಮಾನಿಗಳಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರಲ್ಲಿ ಕೆಲವರು ಮಹಿಳೆಯರೂ ಸೇರಿದ್ದಾರೆ.  ರಣವೀರ್ ರ ಈ ಮಕ್ಕಳಾಟಿಕೆಗೆ ಟ್ವಿಟರಿಗರು ಗರಂ ಆಗಿದ್ದಾರೆ. ಇಂತಹ ಮಂಗನಾಟ ನಿಲ್ಲಿಸಿ ಎಂದು ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಯಾರು ಏನೇ ಹೇಳಲಿ ನೀವು ನಮ್ಮ ಮನೆ ಸೊಸೆ! ಸುಮಲತಾ ಅಂಬರೀಶ್ ಗೆ ಅಭಿಮಾನಿಗಳ ಬಲ