ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕ ಛೋಪ್ರಾ ಹಾಲಿವುಡ್ ನಲ್ಲಿ ಸದ್ದು ಮಾಡುತ್ತಿದ್ದರೆ ಬಾಲಿವುಡ್ ನಟರೊಬ್ಬರು ಇವರಿಬ್ಬರಿಗೂ ಸೆಡ್ಡು ಹೊಡೆಯೋದಕ್ಕೆ ರೆಡಿಯಾಗಿದ್ದಾರೆ. ನಿಮಗಿಂತ ನಾನೇನು ಕಮ್ಮಿ ಅನ್ನುವಂತೆ ಅವರು ಕೂಡ ಹಾಲಿವುಡ್ ನಿರ್ದೇಶಕರೊದಿಂಗೆ ಕೆಲಸ ಮಾಡುತ್ತಿದ್ದಾರೆ. ಅರೆ! ಯಾರ್ರಿ ಅವರು ಅಂತಾ ಯೋಚನೆ ಮಾಡುತ್ತಿದ್ದೀರಾ ಅವರು ಬೇರಾರು ಅಲ್ರಿ ನಮ್ಮ ರಣ್ ವೀರ್ ಸಿಂಗ್.
ಬಾಲಿವುಡ್ ನಲ್ಲಿ ಬಹು ಬೇಡಿಕೆಯ ನಟ ಅಂತಾ ಕರೆಸಿಕೊಳ್ಳುವ ರಣ್ ವೀರ್ ಸಿಂಗ್ ಇದೀಗ ಹಾಲಿವುಡ್ ನಿರ್ದೇಶಕರೊಂದಿಗೆ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.ಅಂದ್ಹಾಗೆ ರಣ್ ವೀರ್ ಸಿಂಗ್ ಕೂಡ ಹಾಲಿವುಡ್ ಗೆ ಹಾರಿದ್ರಾ ಅಂತಾ ಅಚ್ಚರಿಪಡಬೇಡಿ.
ಅವರು ಜಾಹೀರಾತೊಂದರಲ್ಲಿ ಹಾಲಿವುಡ್ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದಾರಂತೆ.ಅಂದ್ಹಾಗೆ ಮೊನ್ನೆ ಹಾಜೀರಾತಿನ ಶೂಟ್ ಗಾಗಿ ರಣ್ ವೀರ್ ಸಿಂಗ್ ಯುರೋಪ್ ಗೆ ಹಾರಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದಅ ವರು ನಾನು ಹಾಲಿವುಡ್ ನಿರ್ದೇಶಕರೊಬ್ಬರು ನಿರ್ದೇಶಿಸುತ್ತಿರುವ ಜಾಹೀರಾತಿನಲ್ಲಿ ಅಭಿನಯಿಸುತ್ತಿದ್ದೇನೆ.ಅದಕ್ಕಾಗಿ ಯುರೋಪ್ ಗೆ ಹೋಗುತ್ತಿದ್ದೇನೆ ಅಂದಿದ್ದಾರೆ.
ಇನ್ನು ರಣ್ ವೀರ್ ಸಿಂಗ್ ಅವರು ಸದ್ಯ ಹಾಲಿವುಡ್ ನಿರ್ದೇಶಕರ ಜೊತೆ ಜಾಹೀರಾತಿನಲ್ಲಿ ಕೆಲಸ ಮಾಡುವಂತಹ ಅವಕಾಶ ಪಡೆದಿದ್ದಾರೆ. ಮುಂದೆ ಇದೇ ಅವರಿಗೆ ಹಾಲಿವುಡ್ ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶ ತಂದುಕೊಟ್ಟರೆ ಅಚ್ಚರಿಯಿಲ್ಲ.ಆದ್ರೆ ಎಲ್ಲದಕ್ಕೂ ಕಾವೇ ಉತ್ತರ ನೀಡಬೇಕಾಗಿದ. ಸದ್ಯಕ್ಕೆ ಜಾಹೀರಾತಿನ ಚಿತ್ರೀಕರಣವನ್ನು ಎಂಜಾಯ್ ಮಾಡುತ್ತಿದ್ದಾರೆ ರಣ್ ವೀರ್ ಸಿಂಗ್.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ