Select Your Language

Notifications

webdunia
webdunia
webdunia
webdunia

ರಣ್ ಬೀರ್ ಹಾಗೂ ಪೂಜಾ ಹೆಗ್ಡೆ ಹಳೇ ಪರಿಚಯವಂತೆ

ರಣ್ ಬೀರ್ ಹಾಗೂ ಪೂಜಾ ಹೆಗ್ಡೆ ಹಳೇ ಪರಿಚಯವಂತೆ
ಮುಂಬೈ , ಬುಧವಾರ, 10 ಆಗಸ್ಟ್ 2016 (09:52 IST)
ಸದ್ಯ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ನವ ಪ್ರತಿಭೆ ಅಂದ್ರೆ ಕನ್ನಡತಿ ಪೂಜಾ ಹೆಗ್ಡೆ. ಹೃತಿಕ್ ರೋಷನ್ ಅವರೊಂದಿಗೆ ಮೊಹೆಂಜದಾರೋ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಪೂಜಾ ಇದೀಗ ಅನೇಕ ನಿರ್ದೇಶಕರು ಹಾಗೇ ನಿರ್ಮಾಪಕರ ಕಣ್ಣು ಕುಕ್ಕುತ್ತಿದ್ದಾಳೆ. ಹೀಗಿರುವಾಗಲೇ ಇಂಟರೆಸ್ಟಿಂಗ್ ವಿಚಾರವೊಂದು ಬಯಲಾಗಿದೆ.

ಪೂಜಾ ಮೊಹೆಂಜದಾರೋ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ರೂ ಪೂಜಾ ರಣ್ ಬೀರ್ ಕಪೂರ್ ಅವರಿಗೆ ಮಾತ್ರ ಮೊದಲೇ ಪರಿಚಯವಂತೆ. ಹಾಗಂಥ ಪೂಜಾ ಹಾಗೂ ರಣ್ ಬೀರ್ ಕಪೂರ್ ಅವರು ಪರಸ್ಪರ ಡೇಟಿಂಗ್ ನಲ್ಲಿ ತೊಡಗಿದ್ದಾರಾ ಅಂತಾ ಲೆಕ್ಕಾಚಾರ ಹಾಕಿದ್ರೆ ನಿಮ್ಮ ಊಹೆ ತಪ್ಪು. ಅಂದ್ಹಾಗೆ ರಣ್ ಬೀರ್ ಹಾಗೂ ಪೂಜಾ ಈ ಹಿಂದೆಯೇ ಜೊತೆಯಾಗಿ ಅಭಿನಯಿಸಿದ್ದರು. ಯಾವ ಸಿನಿಮಾದಲ್ಲಿ ಅಂದ್ರಾ ಸಿನಿಮಾದಲ್ಲಿ ಅಲ್ಲಾ ಕಣ್ರೀ.

ಅವರಿಬ್ಬರು ಜೊತೆಯಾಗಿ ಅಭಿನಯಿಸಿದ್ದು ಒಂದು ಜಾಹೀರಾತಿನಲ್ಲಿ. ಸ್ಕೂಟಿಯೊಂದರ ಜಾಹೀರಾತಿನಲ್ಲಿ ರಣ್ ಬೀರ್ ಹಾಗೂ ಪೂಜಾ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಇದೇ ಜಾಹೀರಾತು ಪೂಜಾ ಪಾಲಿಗೆ ಅದೃಷ್ಟ ತಂದಿದ್ದು ಅಂತೆ. ಜಾಹೀರಾತಿನಲ್ಲಿ  ಪೂಡಾ ರಣ್ಬೀರ್ ಅವರ ಜೊತೆ ಅಭಿನಯಿಸಿದ್ದನ್ನು ನೋಡಿದ ಅಶುತೋಶ್ ಗೌರಿಕರ್ ಅವರು ಪೂಜಾ ಅವರಿಗೆ ಕರೆ ಮಾಡಿದ್ರಂತೆ.ಅಲ್ಲದೇ ಮೊಹೆಂಜದಾರೋ ಸಿನಿಮಾಕ್ಕೆ  ಪೂಜಾ ಅವರನ್ನು ಆಯ್ಕೆ ಮಾಡಿದ್ರಂತೆ. ಸದ್ಯ ಮೊಹೆಂಜದಾರೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಪೂಜಾ. ಈ ಸಿನಿಮಾ ಇದೇ ತಿಂಗಳ 12 ರಂದು ರಿಲೀಸ್ ಆಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 


Share this Story:

Follow Webdunia kannada

ಮುಂದಿನ ಸುದ್ದಿ

ರಹಸ್ಯವಾಗಿ ದಬಾಂಗ್ -3 ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರಾ ಸಲ್ಮಾನ್