Select Your Language

Notifications

webdunia
webdunia
webdunia
webdunia

ಕನ್ನಡದ 'ಜಾಗ್ವಾರ್' ಚಿತ್ರದಲ್ಲಿ ನಟಿ ರಮ್ಯಾ ಕೃಷ್ಣನ್

ಬಾಲಿವುಡ್ ನ್ಯೂಸ್ ಇನ್ ಕನ್ನಡ
ಬೆಂಗಳೂರು , ಬುಧವಾರ, 17 ಆಗಸ್ಟ್ 2016 (13:35 IST)
ಕನ್ನಡ ತಮಿಳು ದ್ವಿಭಾಷೆಯಲ್ಲಿ ಮೂಡಿ ಬರುತ್ತಿರುವ ಜಾಗ್ವಾರ್ ಚಿತ್ರದಲ್ಲಿ ರಮ್ಯಾ ಕೃಷ್ಣನ್ ನಟಿಸಲಿದ್ದಾರೆ. ಜಾಗ್ವಾರ್ ಚಿತ್ರದಲ್ಲಿ ನಾಯಕನಾಗಿ ಹೆಚ್‌ಡಿಕೆ ಪುತ್ರ, ನಟ ನಿಖಿಲ್ ಕುಮಾರ್ ಅಭಿನಯಿಸುತ್ತಿದ್ದಾರೆ. ಖ್ಯಾತ ನಟಿ ರಮ್ಯಾ ಕೃಷ್ಣನ್' ಜಾಗ್ವಾರ್' ಚಿತ್ರದ ಪಾತ್ರ ವರ್ಗದಲ್ಲಿ ಸೇರ್ಪಡೆಗೊಳ್ಳಲಿದ್ದಾರೆ.

 
ಹಿರಿಯ ನಟಿ ರಮ್ಯಾ ಕೃಷ್ಣನ್ ಚಿತ್ರತಂಡದಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ಮೂಲಗಳ ಪ್ರಕಾರ ಮಹಾದೇವ ನಿರ್ದೇಶನದದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ರಮ್ಯಾ ಕೃಷ್ಣ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. 
 
ಸಿನಿಮಾದಲ್ಲಿ ಬರುವ ಮುನ್ನ ನಿಖಿಲ್ ಗೆ ಆಕ್ಷನ್, ಡ್ರಾಮ, ಡ್ಯಾನ್ಸ್ ಎಲ್ಲವನ್ನು ಕಲಿಸಲಾಗಿದೆಯಂತೆ. ಅಷ್ಟೇ ಅಲ್ಲದೆ ಈಗ ನಿರ್ಮಿಸುವ ಚಿತ್ರ ಟಾಲಿವುಡ್ ಅಥ್ವಾ ಬಾಲಿವುಡ್ ರೀಮೇಕ್ ಆಗುತ್ತಿದೆ.

 ಇತ್ತೀಚೆಗೆ ಮೈಸೂರಲ್ಲಿ ಶೂಟಿಂಗ್ ಮುಗಿಸಿದ್ದ ನಿಖಿಲ್ ಗೌಡಗೆ ಬ್ಯೂಸಿ ಶೆಡ್ಯೂಲ್‌ನಲ್ಲಿ ಮಲಗಿಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಹೇಳಲಾಗಿತ್ತು. ಮೊನ್ನೆ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಶೂಟಿಂಗ್ ನಡೆಸಲಾಗಿದೆ. ಅಗಸ್ಟ್ 30ರಂದು ಶೂಟಿಂಗ್ ಮುಕ್ತಾಯಗೊಳಿಸಲು ಚಿತ್ರತಂಡ ನಿರ್ಧರಿಸಿದೆಯಂತೆ.
 
'ಜಗ್ವಾರ್' ಚಿತ್ರವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರ್‌ಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಖಳನಾಯಕಿ ಪಾತ್ರದಲ್ಲಿ ನಟಿಸಲು ಕಾಜಲ್‌ಗೆ ಆಫರ್