Select Your Language

Notifications

webdunia
webdunia
webdunia
webdunia

ರಮೇಶ್ ವಿಶ್ವ ಪರ್ಯಟನೆ

ಬಾಲಿವುಡ್ ನ್ಯೂಸ್ ಇನ್ ಕನ್ನಡ
ಬೆಂಗಳೂರು , ಶನಿವಾರ, 27 ಆಗಸ್ಟ್ 2016 (09:29 IST)
ರಮೇಶ್ ಅರವಿಂದ್ ಕನ್ನಡ ಅಪ್ಪಟ ಪ್ರತಿಭೆ. ಇವ್ರ ಪ್ರತಿಯೊಂದು ಚಿತ್ರವೂ ಹೊಸತನದಿಂದ ಕೂಡಿರಬೇಕು ಅಂತ ಬಯಸ್ತಾರೆ. ಈಗ ಅವ್ರ ನೂರನೇ ಚಿತ್ರ ಪುಷ್ಪಕ ವಿಮಾನ ತೆರೆಗೆ ಬರೋದಕ್ಕೆ ರೆಡಿಯಾಗ್ತಿದೆ. ಈಗಾಗ್ಲೇ ಪುಷ್ಪಕ ವಿಮಾನ ಚಿತ್ರದ ಚಿತ್ರೀಕರಣ ಮುಗಿದಿದೆ. ಚಿತ್ರೀಕರಣ ಮುಗಿಸಿರೋ ರಮೇಶ್ ಸಾಕಷ್ಟು ಖುಷಿಯಲ್ಲಿದ್ದಾರೆ. ಅಲ್ಲದೆ ತಮ್ಮ ಚಿತ್ರಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಲು ವಿಶ್ವಪರ್ಯಟನೆ ನಡೆಸಲು ಮುಂದಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ರಮೇಶ್ ಅರವಿಂದ್ ನಾನು ಕಳೆದ ಮೂವತ್ತು ವರ್ಷಗಳಿಂದ ಪ್ರೇಕ್ಷಕರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದೇನೆ. ಈಗ ಅದನ್ನ ಹಿಂದಿರುಗಿಸುವ ಸಮಯ ಬಂದಿದೆ ಎಂದಿದ್ದಾರೆ. ನವೆಂಬರ್ ನಲ್ಲಿ ಆರಂಭವಾಗಲಿರೋ ಇವರ ಯಾತ್ರೆ ಮೊದಲಿಗೆ ಲಂಡನ್ ನಂತ್ರ ದುಬೈ,ಕೆನಡಾ, ವ್ಯಾಂಕೋವರ್, ಟೊರಾಂಟೋ, ಆಸ್ಟ್ರೇಲಿಯಾ ಮತ್ತು ಅಮೇರಿಕಾಗೆ ತೆರಳಲಿದೆ. 

ರಮೇಶ್ ಕೂಡಾ ತನ್ನ ವಿಶ್ವ ಪ್ರವಾಸದ ಬಗ್ಗೆ ಸಾಕಷ್ಟು ಎಕ್ಸೈಟ್ ಆಗಿದ್ದಾರೆ. ಈಗ ಪ್ರವಾಸ ತನ್ನ ಲೈಫ್ ನಲ್ಲಿ ಹೊಸ ಅನುಭವ ಕಟ್ಟಿಕೊಡಲಿದೆ ಅನ್ನೋ ವಿಶ್ವಾಸದಲ್ಲಿದ್ದಾರೆ. ಅಲ್ಲದೆ 100ಚಿತ್ರಗಳಲ್ಲಿ ನಟಿಸಿ ವಿಭಿನ್ನ ಅನುಭವ ಪಡೆಯಲು ಸಹಕರಿಸಿದ ಎಲ್ಲರಿಗೂ ಈ ಪ್ರವಾಸದ ಮೂಲಕ ತಮ್ಮ ಕೃತಜ್ನತೆ ಸಲ್ಲಿಸಲಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಜಾಗ್ವಾರ್ ಐಟಂ ಧಮಾಕ