Select Your Language

Notifications

webdunia
webdunia
webdunia
webdunia

ನನ್ನ ಆದರ್ಶ ಮಹಿಳೆ ಹೇಗಿರಬೇಕು ಎಂದ್ರೆ 'ನಾನು ಹೇಳುವುದನ್ನು ಕೇಳುತ್ತಿರುಬೇಕು' :ರಾಮಗೋಪಾಲ

Ram Gopal Varma
ಮುಂಬೈ , ಶುಕ್ರವಾರ, 27 ಮೇ 2016 (11:44 IST)
ಬಾಲಿವುಡ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ಸದಾ ಎತ್ತಿದ ಕೈ ರಾಮಗೋಪಾಲ ವರ್ಮಾ ಅವರದ್ದು.. ನೀವೂ ಅವರನ್ನು ದ್ವೇಷ ಮಾಡಿ, ಅಥವಾ ಪ್ರೀತಿ ಮಾಡಿ, ಆದ್ರೆ ಆರ್‌ಜಿವಿಯವರನ್ನು ನೀವೂ ಎಂದಿಗೂ ನಿರ್ಲಕ್ಷಿಸಲಾರಿರಿ. ಇದೀಗ ನಿರ್ಮಾಪಕ  ರಾಮಗೋಪಾಲ ವರ್ಮಾ ತಮ್ಮ ಆದರ್ಶದ ಮಹಿಳೆ ಕುರಿತು ಹೇಳಿಕೆ ನೀಡಿದ್ದಾರೆ.  


'ನನ್ನ ಆದರ್ಶ ಮಹಿಳೆ ಹೇಗಿರಬೇಕು ಎಂದ್ರೆ ನಾನು ಹೇಳುವುದನ್ನು ಕೇಳುತ್ತಿರಬೇಕು.. ಮಾತನಾಡದೇ ನನ್ನ ಮಾತನ್ನು ಆಲಿಸಬೇಕು' ಎಂದು ರಾಮಗೋಪಾಲ ವರ್ಮಾ ಹೇಳಿದ್ದಾರೆ. 
 
ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ರಾಮಗೋಪಾಲ ವರ್ಮಾ, ಬಾಲಿವುಡ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ಸದಾ ಎತ್ತಿದ ಕೈ.. ತಮಗೆ ಅನ್ನಿಸಿರುವುದನ್ನು ನೇರವಾಗಿ ಹೇಳುವ ವ್ಯಕ್ತಿತ್ವ . ನೀವೂ ಅವರನ್ನು ದ್ವೇಷ ಮಾಡಿ, ಅಥವಾ ಪ್ರೀತಿ ಮಾಡಿ, ಆದ್ರೆ ಆರ್‌ಜಿವಿಯವರನ್ನು ನೀವೂ ಎಂದಿಗೂ ನಿರ್ಲಕ್ಷಿಸಲಾರಿರಿ.  
 
ಈ ಹಿಂದೆ ಟೈಗರ್ ಶ್ರಾಫ್ ಕೂಡ ಇಂಥದ್ದೇ ಹೇಳಿಕೆ ನೀಡಿ ವಿವಾದವನ್ನು ಸೃಷ್ಟಿಸಿದ್ದರು. ಅದೇ ರೀತಿ ರಾಮಗೋಪಾಲ ವರ್ಮಾ ಕೂಡ ಅಂಥ್ದದೇ ಹೇಳಿಕೆ ನೀಡಿದ್ದಾರೆ.
 
ಇನ್ನೂ ರಾಮಗೋಪಾಲ ವರ್ಮಾರವರ ವೀರಪ್ಪನ್ ಚಿತ್ರ ಇಂದು ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ನ್ಯಾಷನಲ್ ಅವಾರ್ಡ್ ವಿನ್ನರ್ ಉಷಾ ಜಾಧವ್ ಕಾಣಿಸಿಕೊಂಡಿದ್ದಾರೆ. ವೀರಪ್ಪನ ಹೆಂಡತಿ ಮುತ್ತುಲಕ್ಷ್ಮೀ ಪಾತ್ರದಲ್ಲಿ ಉಷಾ ಮಿಂಚಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಶಾರೂಖ್ ಖಾನ್ ಪುತ್ರ ಅಬ್ರಾಮ್ ಬರ್ತಡೇ ಸೆಲೆಬ್ರೇಷನ್