Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಭಾವಚಿತ್ರವಿರುವ ಡ್ರೆಸ್ ಧರಿಸಿದ ರಾಖಿ ಸಾವಂತ್: ಎಫ್‌ಐಆರ್ ದಾಖಲು

ಪ್ರಧಾನಿ ಮೋದಿ ಭಾವಚಿತ್ರವಿರುವ ಡ್ರೆಸ್ ಧರಿಸಿದ ರಾಖಿ ಸಾವಂತ್: ಎಫ್‌ಐಆರ್ ದಾಖಲು
ಜೈಪುರ್ , ಶುಕ್ರವಾರ, 4 ನವೆಂಬರ್ 2016 (16:52 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರವಿರುವ ಡ್ರೆಸ್ ಧರಿಸಿದ್ದಕ್ಕಾಗಿ ಬಾಲಿವುಡ್ ಹಾಟ್ ಐಟಂ ಗರ್ಲ್ ರಾಖಿ ಸಾವಂತ್ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಶ್ಲೀಲ ರೀತಿಯಲ್ಲಿ ಮತ್ತು ಮಾನನಷ್ಟ ಮಾಡುವ ಉದ್ದೇಶದಿಂದ ರಾಖಿ ಸಾವಂತ್ ಡ್ರೆಸ್ ಧರಿಸಿದ್ದಾರೆ ಎಂದು ಕಂಕ್ರೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
 
ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಆಗುತ್ತಿರುವ ಮೋದಿ ಭಾವಚಿತ್ರವಿರುವ ಡ್ರೆಸ್ ಧರಿಸಿದ ರಾಖಿ ಸಾವಂತ್ ಫೋಟೋಗಳ ಆಧಾರದ ಮೇಲೆ ಪ್ರಜೀತ್ ತಿವಾರಿ ಎನ್ನುವ ವಕೀಲರು ಕಂಕ್ರೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಲಕ್ಷ್ಮಣ್ ರಾಮ್ ತಿಳಿಸಿದ್ದಾರೆ.
 
ಐಟಂ ಗರ್ಲ್ ರಾಖಿ ಸಾವಂತ್ ಪ್ರಧಾನಿ ಮೋದಿಯವರಿಗೆ ಅಪಮಾನ ಮಾಡಲು ಇಂತಹ ಕೃತ್ಯ ಎಸಗಿದ್ದಾಳೆ ಎಂದು ದೂರುದಾರರು ಆರೋಪಿಸಿದ್ದಾರೆ.
 
ರಾಖಿ ಸಾವಂತ್ ವಿರುದ್ಧ ಕೆಲ ಪ್ರಕರಣಗಳನ್ನು ದಾಖಲಿಸಲಾಗಿದ್ದು ತನಿಖೆ ನಡೆಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಪ್ರತ್ಯೂಶಾ ಬ್ಯಾನರ್ಜಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಪ್ರಿಯಕರ ರಾಹುಲ್ ರಾಜ್