Select Your Language

Notifications

webdunia
webdunia
webdunia
webdunia

'ನಟರಾಜ್ ಸರ್ವಿಸ್ 'ಚಿತ್ರದ ಸಿಡಿ ಬಿಡುಗಡೆ ಮಾಡಿದ ಪುನೀತ್ ರಾಜಕುಮಾರ್

'ನಟರಾಜ್ ಸರ್ವಿಸ್ 'ಚಿತ್ರದ ಸಿಡಿ ಬಿಡುಗಡೆ ಮಾಡಿದ ಪುನೀತ್ ರಾಜಕುಮಾರ್
ಬೆಂಗಳೂರು , ಶುಕ್ರವಾರ, 26 ಆಗಸ್ಟ್ 2016 (18:02 IST)
ನಟ ಶರಣ್ ಅಭಿನಯದ 'ನಟರಾಜ್ ಸರ್ವಿಸ್' ಚಿತ್ರದ ಸಿಡಿಯನ್ನು ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದರು. ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ನಟರಾಜ್ ಸರ್ವಿಸ್ ಚಿತ್ರದ ಸಿಡಿ ಬಿಡುಗಡೆಗೊಳಿಸಲಾಯ್ತು. ಈಗಾಗ್ಲೇ ಚಿತ್ರದ ಹಾಡು ಅಲ್ಲಾ ಅಲ್ಲಾ ಹಿಟ್ ಆಗಿದೆ.
ಈ ಚಿತ್ರದ ನಿರ್ದೇಶನ ಪವನ್ ಒಡೆಯರ್ ಅವರದ್ದು, ನಿರ್ಮಾಣ ರಾಜಕುಮಾರ್ ಅವರು ಮಾಡಿದ್ದಾರೆ. ಬಿಡುಗಡೆ ಸಮಾರಂಭದಲ್ಲಿ ಅನುಪ್ ಸೇಲಿನ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಚಿತ್ರಕ್ಕೆ ಸಂಗೀತ್ ನಿರ್ದೇಶನ ಅನುಪ್ ಸೆಲೀನ್ ಅವರದ್ದು, ಜೆಪಿ ಮ್ಯೂಸಿಕ್ ಬ್ಯಾನರ್‌ನಲ್ಲಿ ಚಿತ್ರ ಮೂಡಿ ಬರುತ್ತಿದೆ. 

 
ನಟರಾಜ್ ಸರ್ವೀಸ್ ಸಿನಿಮಾ ಪವನ್ ಒಡೆಯರ್ ಪಾಲಿಗೆ ವಿಭಿನ್ನವಾದ ಸಿನಿಮಾ. ಈ ಸಿನಿಮಾದಲ್ಲಿ ಕಾಮಿಡಿ ಕಿಂಗ್ ಶರಣ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪವನ್ ನಿರ್ದೇಶನದ ಐದನೇ ಸಿನಿಮಾ ಇದಾಗಿದ್ದು, ಅಭಿಮಾನಿಗಳಲ್ಲಿ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.ಸಿನಿಮಾದಲ್ಲಿ ಶರಣ್ ಗೆ ನಾಯಕಿಯಾಗಿ ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ಮಯೂರಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

'ಅನಿಷ್ ತೇಜೆಶ್ವರ್' ಮುಂದಿನ ಚಿತ್ರ 'ಮಂಜಾ'