Select Your Language

Notifications

webdunia
webdunia
webdunia
webdunia

ಹೆಣ್ಣುಮಗುವನ್ನು ದತ್ತು ಪಡೆದ ಸನ್ನಿಲಿಯೋನ್-ಡೆನಿಯಲ್‌ ವೆಬರ್‌ ದಂಪತಿ

ಹೆಣ್ಣುಮಗುವನ್ನು ದತ್ತು ಪಡೆದ ಸನ್ನಿಲಿಯೋನ್-ಡೆನಿಯಲ್‌ ವೆಬರ್‌ ದಂಪತಿ
ಮುಂಬೈ , ಶುಕ್ರವಾರ, 21 ಜುಲೈ 2017 (11:13 IST)
ಮುಂಬೈ: ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಮತ್ತು ಪತಿ ಡೆನಿಯಲ್‌ ವೆಬರ್‌ ಹೆಣ್ಣುಮಗುವೊಂದನ್ನು ದತ್ತು ಪಡೆದಿದ್ದಾರೆ.  
 
ಮಹಾರಾಷ್ಟ್ರದ ಲಾತೂರ್‌ನಿಂದ 21 ತಿಂಗಳ ಮಗುವೊಂದನ್ನು ದತ್ತು ಪಡೆದಿರುವ ಸನ್ನಿ ಹಾಗೂ ಡೆನಿಯಲ್ ದಂಪತಿ ಮಗುವಿಗೆ ನಿಶಾ ಕೌರ್‌ ವೆಬರ್‌ ಎಂದು ನಾಮಕರಣ ಮಾಡಿದ್ದಾರೆ. 
 
2 ವರ್ಷದ ಹಿಂದೆ ಮಗುವೊಂದು ಬೇಕೆಂದು ಅನಾಥಾಶ್ರಮಕ್ಕೆ ದಂಪತಿ ಮನವಿ ಮಾಡಿದ್ದರು. ಈಗ ಮಗುವನ್ನು ಕಾನೂನಾತ್ಮಕವಾಗಿ ಮನೆಗೆ ಕರೆದುಕೊಂಡು ಹೋಗಲು ಅವಕಾಶ ಪಡೆದು ಸಂಭ್ರಮಿಸಿದ್ದಾರೆ.
 
ಕಾನೂನು ಅನ್ವಯ ದತ್ತು ಪಡೆಯಲು ಹಲವು ಪತ್ರಗಳನ್ನು ಸಿದ್ದಪಡಿಸಿ ತಿರುಗಾಡಬೇಕಾಯಿತು. ಈಗ ನಿಶಾಳ ಮುಖ ನೋಡಿ ಖುಷಿ ಎನಿಸುತ್ತಿದೆ ಎಂದು ಡೆನಿಯಲ್‌ ಹೇಳಿದ್ದಾರೆ. ಸನ್ನಿ ಡೆನಿಯಲ್ ದಂಪತಿಯ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡಿ ಉನ್ನತ ಸ್ಥಾನಕ್ಕೇರುವಂತೆ ಮಾಡಿ ಎಂದು ಹಲವರು ಸಲಹೆ ನೀಡಿದ್ದಾರೆ
 

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಕಿನ್‌ ಪಾರ್ಕ್‌ ಸಿಂಗರ್ ಚೆಸ್ಟರ್‌ ಬೆನ್ನಿಂಗ್ಟನ್‌ ಆತ್ಮಹತ್ಯೆ..!