Select Your Language

Notifications

webdunia
webdunia
webdunia
webdunia

ಮರಾಠಿ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ

ಮರಾಠಿ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ
ಮುಂಬೈ , ಬುಧವಾರ, 2 ನವೆಂಬರ್ 2016 (12:40 IST)
ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಮರಾಠಿ ಸಿನಿಮಾವೊಂದರಲ್ಲಿ ನಟಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ ಎಂದು ಟ್ವೀಟ್ ಮಾಡಿದ್ದಾರೆ.

ರಾಜೇಶ್ ಮಪೂಸ್ಕರ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಪ್ರಿಯಾಂಕ ಮರಾಠಿ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ವೆಂಟಿಲೇಟರ್ ಎಂದು ಈ ಚಿತ್ರದ ಹೆಸರು. ಸಿನಿಮಾದಲ್ಲಿ ನಿರ್ದೇಶಕ ಆಶುತೋಷ್ ಗೌರೀಕರ್ ಹಾಗೂ ಹಲವು ಹಿರಿಯ ರಂಗಭೂಮಿ ಕಲಾವಿದರೂ ನಟಿಸಿದ್ದಾರೆ.

ಇದು ಈ ವಾರ ಬಿಡುಗಡೆಯಾಗಲಿದ್ದು, ಈಗಾಗಲೇ ಮುಂಬೈನ ಮಾಮಿ ಚಿತ್ರೋತ್ಸವದಲ್ಲಿ ಪರದರ್ಶನಗೊಂಡಿದೆ.  ಹೀಗಾಗಿ ಆ ಕ್ಷಣಕ್ಕಾಗಿ ಕಾಯುತ್ತಿರುವುದಾಗಿ ಪ್ರಿಯಾಂಕ ತಮ್ಮ ಟ್ವಿಟರ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುರಾರಿಯ ಬೈಕ್ ಹರಾಜಿಗಿದೆಯಂತೆ!