ಮತ್ತೊಂದು ಬಾಲಿವುಡ್ ಸಿನಿಮಾಗೆ ಸೈ ಎಂದ ಕನ್ನಡತಿ ಪ್ರಣೀತಾ

ಶುಕ್ರವಾರ, 27 ಡಿಸೆಂಬರ್ 2019 (09:03 IST)
ಬೆಂಗಳೂರು: ಅಪ್ಪಟ ಕನ್ನಡ ಚೆಲುವೆ ಪ್ರಣೀತಾ ಸುಭಾಷ್ ಈಗಾಗಲೇ ಅಜಯ್ ದೇವಗನ್ ಗೆ ನಾಯಕಿಯಾಗುವ ಮೂಲಕ ಬಾಲಿವುಡ್ ಪ್ರವೇಶಿಸುತ್ತಿರುವುದು ಗೊತ್ತೇ ಇದೆ. ಇದೀಗ ಪ್ರಣೀತಾ ಮತ್ತೊಂದು ಸಿನಿಮಾಗೆ ಸಹಿ ಹಾಕಿದ ಸುದ್ದಿ ಬಂದಿದೆ.


ಅಜಯ್ ದೇವಗನ್ ಗೆ ನಾಯಕಿಯಾಗಿ ಭುಜ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಣೀತಾ ಈಗ 2003 ರಲ್ಲಿ ಬಿಡುಗಡೆಯಾಗಿದ್ದು ಹಂಗಾಮ ಎನ್ನುವ ಸೂಪರ್ ಹಿಟ್ ಸಿನಿಮಾದ ಎರಡನೇ ಭಾಗದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಪ್ರಿಯದರ್ಶನ್ ರ ನಿರ್ದೇಶನದಲ್ಲಿ ಬರುತ್ತಿರುವ ಈ ಸಿನಿಮಾದಲ್ಲಿ ಪರೇಶ್ ರಾವಲ್ ರಂತಹ ಹಿರಿಯ ಕಲಾವಿದರೂ ಇರಲಿದ್ದಾರೆ. ಇದೊಂದು ಕಾಮಿಡಿ ಎಂಟರ್ ಟೈನರ್ ಆಗಿರಲಿದ್ದು, ಸದ್ಯದಲ್ಲೇ ಶೂಟಿಂಗ್ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅವನೇ ಶ್ರೀಮನ್ನಾರಾಯಣ ಜಪ ಶುರು: ಎರಡು ವರ್ಷದ ನಂತರ ರಿಲೀಸ್ ಆಯ್ತು ರಕ್ಷಿತ್ ಸಿನಿಮಾ