Select Your Language

Notifications

webdunia
webdunia
webdunia
webdunia

ಕಂಗನಾ ರನಾವತ್, ಹೃತಿಕ್ ರೋಷನ್ ಪ್ರಕರಣಕ್ಕೆ ತಿಲಾಂಜಲಿ

ಕಂಗನಾ ರನಾವತ್, ಹೃತಿಕ್ ರೋಷನ್ ಪ್ರಕರಣಕ್ಕೆ ತಿಲಾಂಜಲಿ
Mumbai , ಗುರುವಾರ, 17 ನವೆಂಬರ್ 2016 (11:37 IST)
ಮುಂಬೈ: ತಮಗೆ ಹೃತಿಕ್ ರೋಷನ್ ಅಶ್ಲೀಲ ಈಮೇಲ್ ಕಳುಹಿಸಿದ್ದಾರೆಂದು ಕಂಗನಾ ರನಾವತ್ ಗಂಭೀರ ಆರೋಪ ಮಾಡಿ ವಿವಾದಕ್ಕೆ ಕಾರಣವಾದ ಪ್ರಕರಣ ಈಗ ತಣ್ಣಗಾಗಲಿದೆ. ಇಬ್ಬರೂ ಪರಸ್ಪರ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ಬಗ್ಗೆ ಮುಂಬೈ ಪೊಲೀಸರ ಫೊರೆನ್ಸಿಕ್ ಲ್ಯಾಬ್ “ಶೂನ್ಯ” ವರದಿ ಸಲ್ಲಿಸಿದೆ.

ಹೃತಿಕ್ ತಮಗೆ ಅಶ್ಲೀಲ ಈಮೇಲ್ ಕಳುಹಿಸಿದ್ದರು ಎಂದು ಕಂಗನಾ ದೂರಿದ್ದರೆ, ಅಂತಹ ಯಾವುದೇ ಮೇಲೆ ತಾನು ಕಳುಹಿಸಿಲ್ಲ. ಇದೆಲ್ಲಾ ತನ್ನ ಮೇಲ್  ಐಡಿಯನ್ನು ದುರ್ಬಳಕೆ ಮಾಡಿ ಯಾರೋ ಕಳುಹಿಸಿದ್ದು ಎಂದು ಹೃತಿಕ್ ಪ್ರತಿವಾದಿಸಿದ್ದರು. ಇದು ಬಾಲಿವುಡ್ ನಲ್ಲಿ ಭಾರೀ ಗುಲ್ಲೆಬ್ಬಿಸಿತ್ತು. ಅಲ್ಲದೆ ಇಬ್ಬರೂ ಕೆಸರೆರಚಾಟ ಮಾಡಿಕೊಂಡು ದೂರು ಪ್ರತಿ ದೂರು ಸಲ್ಲಿಸಿದ್ದರು.

ಇದೀಗ ವಿಚಾರಣೆ ನಡೆಸಿದ ಪೊಲೀಸರು ಯಾವುದೇ ಸುಳಿವು ಲಭಿಸದೆ ಹಿನ್ನಲೆಯಲ್ಲಿ ಪ್ರಕರಣಕ್ಕೆ ಮುಕ್ತಾಯ ಹಾಡಲು ತೀರ್ಮಾನಿಸಿದ್ದಾರೆ. ಕಂಗನಾ ಹೇಳಿದ ಹೃತಿಕ್ ಈಮೇಲ್ ಐಡಿ ಸರ್ವರ್ ಅಮೆರಿಕ ಮೂಲದ್ದಾಗಿದೆ. ಹೀಗಾಗಿ ಈಮೇಲ್ ಕಳುಹಿಸಿದವರ ವಿವರ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಜನೀಕಾಂತ್ ಅಭಿನಯದ ರೋಬೋಟ್ 2 ಫಸ್ಟ್ ಲುಕ್ ಬಹಿರಂಗ