ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಕೆಂಪುಕೋಟೆಯ ಮೇಲಿಂದ ದೇಶದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದರು.
ಪಾಕಿಸ್ತಾನದಲ್ಲಿ ಪೇಶಾವರದಲ್ಲಿ ಉಗ್ರರು ನೂರಕ್ಕೂ ಅಧಿಕ ಎಳೆಯ ಮಕ್ಕಳ ಮಾರಣ ಹೋಮ ಮಾಡಿದಾಗ ಭಾರತ ತೀವ್ರವಾಗಿ ಮರುಗಿತು. ಆದರೆ ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ. ಉಗ್ರರನ್ನು ವೈಭವೀಕರಿಸುತ್ತದೆ ಎಂದು ಕಿಡಿ ಕಾರಿದರು.
ಭಾರತವು ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಅನನ್ಯ ದೇಶ.. ಅದು ನಮ್ಮ ಸಂಸ್ಕೃತಿಯ ಮುಖ್ಯ ತಿರುಳಾಗಿದೆ. ಆದುದರಿಂದ ನಮ್ಮ ದೇಶದಲ್ಲಿ ಹಿಂಸೆ ಮತ್ತು ದೌರ್ಜನ್ಯಕ್ಕೆ ಅವಕಾಶ ಇಲ್ಲ ಎಂದು ಹೇಳಿದರು.
ಬಲೂಚಿಸ್ಥಾನದ ಜನರು ನನಗೆ ಕೃತಜ್ಞತೆ ಹೇಳಿದ್ದಾರೆ. ಅವರು ಈ ರೀತಿ ಹೇಳಿದ್ದಾರೆಂದರೆ ಅದು ಭಾರತದ 125 ಕೋಟಿ ಜನರಿಗೆ ಹೇಳುವ ಕೃತಜ್ಞತೆಯಾಗಿದೆ. ಬಲೂಚಿಸ್ಥಾನ, ಗಿಲ್ ಗಿಟ್, ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನರು ಕಳೆದ ಕೆಲವು ದಿನಗಳಿಂದ ನನಗೆ ತುಂಬಾ ಕೃತಜ್ಞತೆ ಹೇಳಿದ್ದಾರೆ. ನಾನು ಕೂಡ ಅವರಿಗೆ ಕೃತಜ್ಞನಾಗಿದ್ದೇನೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ