Select Your Language

Notifications

webdunia
webdunia
webdunia
webdunia

ಹೀರೋಯಿನ್ ಮಾಸ್ಕ್ ಹಿಂದಿನ ರಹಸ್ಯ ಏನು?

ನಟಿ ಪರಿಣೀತಿ ಚೋಪ್ರಾ
Mumbai , ಶನಿವಾರ, 24 ಡಿಸೆಂಬರ್ 2016 (13:48 IST)
ಬಾಲಿವುಡ್ ಬ್ಯೂಟಿ ಪರಿಣೇತಿ ಚೋಪ್ರಾ ಸದ್ಯಕ್ಕೆ ಮೇರಿ ಪ್ಯಾರಿ ಬಿಂದು ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆಯುಷ್ಮಾ ಖುರಾನಾ ನಾಯಕ ನಟ. ಶೂಟಿಂಗ್ ಸ್ಪಾಟ್‌ನಿಂದ ಒಂದು ಫೋಟೋ ತೆದುಕೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ ಪರಿಣೀತಿ.
 
ಮಾಸ್ಕ್ ಹಾಕ್ಕೊಂಡು ಪೋಸು ಕೊಟ್ಟಿರುವ ಈ ಫೋಟೋದ ಸೆಟ್‍ನಲ್ಲಿ ತುಂಬಾ ಧೂಳು ಕಾಣುತ್ತಿದೆ. ಆದರೆ ಅವರ ಕಾಮೆಂಟ್ ಈ ರೀತಿ ಇತ್ತು, ನೋಡಿ ಎಷ್ಟು ಚೆನ್ನಾಗಿದೆ ನಮ್ಮ ಪ್ರೊಡಕ್ಷನ್ ಎಂದು ಹಾಕಿದ್ದರು. ಚಿತ್ರತಂಡವೆಲ್ಲಾ ಮಾಸ್ಕ್ ಹಾಕ್ಕೊಂಡು ಆರೋಗ್ಯ ಕಾಪಾಡಿಕೊಳ್ಳುತ್ತಿದೆ ಎಂಬರ್ಥದಲ್ಲಿ ಕಾಮೆಂಟ್ ಹಾಕಿದ್ದಾರೆ. 
 
ಆದರೆ ಫೋಟೋ ನೋಡಿದರೆ ಮಾತ್ರ ಇನ್ನೊಂದು ತರಹ ಇದೆ. ಚಿತ್ರದಲ್ಲಿ ಪರಿಣೀತಿ ಮಾತ್ರ ಮಾಸ್ಕ್ ಹಾಕ್ಕೊಂಡಿದ್ದಾರೆ, ಆದರೆ ಉಳಿದವರು ಹಾಗೆಯೇ ಕಸ ತಳ್ಳುತ್ತಿರುವುದನ್ನು ಕಾಣಬಹುದು. ಒಟ್ನಲ್ಲಿ ಈ ಫೋಟೋ ಹಾಕಿ ಗೊಂದಲ ಮೂಡಿಸಿದ್ದಾರೆ ಪರಿಣೀತಿ ಚೋಪ್ರಾ. ಮೇರಿ ಪ್ಯಾರಿ ಬಿಂದು ಚಿತ್ರ ಮೇ.12,2017ಕ್ಕೆ ತೆರೆಗೆ ಬರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜನತಾ ಚಿತ್ರಮಂದಿರಗಳಿಗೆ ಪ್ರೋತ್ಸಾಹಧನ ಯೋಜನೆ ಜಾರಿ