Select Your Language

Notifications

webdunia
webdunia
webdunia
webdunia

ಸುಶಾಂತ್ ಸಿಂಗ್ ರಜಪೂತ್ ಜತೆಗೆ ರೋಮ್ಯಾನ್ಸ್ ಮಾಡಲಿದ್ದಾಳೆ ಪರಿಣಿತಿ ಛೋಪ್ರಾ?

ಸುಶಾಂತ್ ಸಿಂಗ್ ರಜಪೂತ್ ಜತೆಗೆ ರೋಮ್ಯಾನ್ಸ್ ಮಾಡಲಿದ್ದಾಳೆ ಪರಿಣಿತಿ ಛೋಪ್ರಾ?
ಮುಂಬೈ , ಗುರುವಾರ, 30 ಜೂನ್ 2016 (11:10 IST)
ಬಾಲಿವುಡ್ ನಟ ಸುಷಾಂತ್ ಸಿಂಗ್ ಜತೆಗೆ ನಟಿ ಪರಿಣಿತಿ ಚೋಪ್ರಾ ಮಧ್ಯೆ ರೋಮ್ಯಾನ್ಸ್ ಮಾಡಲಿದ್ದಾಳಂತೆ. ಮುಂಬರುವ ಚಿತ್ರದಲ್ಲಿ ಪರಿಣಿತಿ ಛೋಪ್ರಾ ಸುಷಾಂತ್ ಸಿಂಗ್ ಆನ್‌ಸ್ಕ್ರೀನ್ ಮೇಲೆ ಇಬ್ಬರು ರೋಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ. ಹೋಮಿ ಅಡ್ಜಾನಿಯಾ ಚಿತ್ರದಲ್ಲಿ ಲೀಡ್‌ ರೋಲ್‌ನಲ್ಲಿ ಪರಿಣಿತಿ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಲೀಡ್ ರೋಲ್‌ನಲ್ಲಿ ಇರ್ಫಾನ್ ಖಾನ್ ಕಾಣಿಸಿಕೊಂಡಿದ್ದಾರೆ. ರಾಕ್ ಸ್ಟಾರ್ ಸುಷಾಂತ್ ಸಿಂಗ್ ಜತೆಗೆ ಪರಿಣಿತಿ ತೆರೆ ಮೇಲೆ ರೋಮ್ಯಾನ್ಸ್ ಮಾಡಲಿರುವುದು ಪರಿಣಿತಿ ಛೋಪ್ರಾ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಈ ಚಿತ್ರದಲ್ಲಿ ಪರಿಣಿತಿ ಚೋಪ್ರಾ, ಸುಷಾಂತ್ ಸಿಂಗ್ ರಜಪೂತ ಕಾಣಿಸಿಕೊಳ್ಳುತ್ತಿದ್ದಾರೆ. ರಾಕ್ ಸ್ಟಾರ್ ಸುಷಾಂತ್ ಸಿಂಗ್ ಜತೆಗೆ ಪರಿಣಿತಿ ತೆರೆ ಮೇಲೆ ರೋಮ್ಯಾನ್ಸ್ ಮಾಡಲಿರುವುದು ಅಭಿಮಾನಿಗಳಿಗೆ ಸಖತ್ ಖುಷಿ ನೀಡುವುದಂತೂ ಗ್ಯಾರಂಟಿ. 
 
ಹಿಂದೆ ಸುಶಾಂತ್ ಅವರು ಅಂಕಿತಾ ಅವರಿಂದ ದೂರವಾದ ಬಳಿಕ ಕೃತಿ ಅವರೊಂದಿಗೆ ತುಂಬಾನೇ ಕ್ಲೋಸ್ ಆಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಅವರಿಬ್ಬರು ಜೊತೆಯಾಗಿರುವ ಕೆಲವು ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡು ಮಾಡಿದ್ದವು.
 
ಇನ್ನು ಅಂಕಿತಾ ಲೋಖಂಡೆ ಅವರಿಂದ ಸುಶಾಂತ್ ದೂರವಾಗುವ ವೇಳೆ ಅವರಿಬ್ಬರು ದೂರವಾಗಿದ್ದು ಯಾಕೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿತ್ತು. ಆಗ ಸುಶಾಂತ್ ಅವರ ಹೆಸರಿನ ಜೊತೆ ಪರಿಣಿತಿ ಛೋಪ್ರಾ ಅವರ ಹೆಸರು ಕೇಳಿ ಬಂದಿತ್ತು.ಆದ್ರೀಗ ಸುಶಾಂತ್ ಅವರು ಕೃತಿ ಅವರೊಂದಿಗೆ ಓಡಾಡುತ್ತಿರೋ ವಿಚಾರ ಬಾಲಿವುಡ್ ಮಂದಿಯ ಆಹಾರವಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ರುಸ್ತುಮ್' ಚಿತ್ರದ ಟ್ರೇಲರ್ ಬಿಡುಗಡೆ.. ವಿಡಿಯೋ