Webdunia - Bharat's app for daily news and videos

Install App

ಅಕ್ಷಯ್ ಜೊತೆ ನಟನೆ ಪರಿಣಿತಿ ಚೋಪ್ರಾ ಫುಲ್ ಖುಷ್

ನಾಗಶ್ರೀ ಭಟ್
ಸೋಮವಾರ, 19 ಫೆಬ್ರವರಿ 2018 (13:59 IST)
ಅಕ್ಷಯ್ ಕುಮಾರ್ ಅವರೊಂದಿಗೆ ಮೊದಲ ಬಾರಿ ಪರದೆಯನ್ನು ಹಂಚಿಕೊಳ್ಳುತ್ತಿರುವ ಪರಿಣಿತಿ ಚೋಪ್ರಾ ತಾವು 'ಕೇಸರಿ' ಚಿತ್ರದಲ್ಲಿ ಸೂಪರ್‌ಸ್ಟಾರ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. ಅನುರಾಗ್ ಸಿಂಗ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಹವಿಲ್ದಾರ್ ಇಶಾರ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಪರಿಣಿತಿ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
"ನಾನು ಅವರೊಂದಿಗೆ ಕೆಲಸ ಮಾಡಲು ಬಹಳ ಉತ್ಸುಕಳಾಗಿದ್ದೇನೆ. ಮೂರು ದಿನಗಳಲ್ಲಿ ನಾನು 'ನಮಸ್ತೆ ಇಂಗ್ಲೆಂಡ್' ಶೂಟಿಂಗ್‌ಗೆ ತೆರಳಲಿದ್ದೇನೆ. ಆದರೆ ಕೇಸರಿ ಚಿತ್ರಕ್ಕಾಗಿ ನಾನು ಹೆಚ್ಚು ಉತ್ಸುಕಳಾಗಿದ್ದೇನೆ" ಎಂದು ಪರಿಣಿತಿ ಚೋಪ್ರಾ ತಮ್ಮ ಸಂತೋಷವನ್ನು ಹಂಚಿಕೊಂಡರು.
 
ಪರಿಣಿತಿ ತಮ್ಮ ಮಾತನ್ನು ಮುಂದುವರಿಸುತ್ತಾ, "ತುಂಬಾ ದಿನದಿಂದ ಅಕ್ಷಯ್ ಕುಮಾರ್ ಅವರೊಂದಿಗೆ ಅಭಿನಯಿಸುವುದು ನನ್ನ ಕನಸಾಗಿತ್ತು. ಅವರು ಪಂಜಾಬಿ ಹಾಗೂ ನಾನೂ ಸಹ ಪಂಜಾಬಿಯವಳು ಮತ್ತು ನಾವಿಬ್ಬರೂ ಪಂಜಾಬಿ ಚಿತ್ರದಲ್ಲಿ ಅಭಿನಯಿಸುತ್ತಿದ್ದೇವೆ. ಈ ಚಿತ್ರದ ಶೂಟಿಂಗ್ ಅನ್ನು ಆರಂಭಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ" ಎಂದು ಕಾರ್ಯಕ್ರಮವೊಂದರಲ್ಲಿ ವರದಿಗಾರರಿಗೆ ಹೇಳಿದ್ದಾರೆ. ಚಿತ್ರದಲ್ಲಿನ ಅಕ್ಷಯ್ ಕುಮಾರ್ ಅವರ ಲುಕ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿನ ಅವರ ಲುಕ್ ಕುರಿತು ಕೇಳಿದಾಗ ಚಿತ್ರ ತಂಡ ಅದನ್ನು ಯಾವಾಗ ಅನಾವರಣಗೊಳಿಸಬೇಕು ಎನ್ನುವುದನ್ನು ನಿರ್ಧರಿಸಲಿದೆ ಎಂದು ಹೇಳಿದರು.
 
ಇದರೊಂದಿಗೆ, ಪರಿಣಿತಿ ಅರ್ಜುನ್ ಕಪೂರ್ ಅವರೊಂದಿಗೆ 'ನಮಸ್ತೆ ಇಂಗ್ಲೆಂಡ್' ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. "ದುರದೃಷ್ಟವಶಾತ್ ಏಕಕಾಲದಲ್ಲಿ ಇದನ್ನು ಮಾಡಬೇಕು, ಚಿತ್ರೀಕರಣದ ದಿನಾಂಕಗಳನ್ನು ಹಾಗೆ ಯೋಜಿಸಲಾಗಿದೆ. ಆದ್ದರಿಂದ 'ಕೇಸರಿ' ಗಾಗಿ ಅಮೃತಸರದಲ್ಲಿ ಮತ್ತು 'ನಮಸ್ತೆ ಇಂಗ್ಲೆಂಡ್‌' ಗಾಗಿ ಇಂಗ್ಲೆಂಡ್‌ನಲ್ಲಿ ನಾನು ಚಿತ್ರೀಕರಣದಲ್ಲಿರಲಿದ್ದೇನೆ" ಎಂದು 'ಕೇಸರಿ' ಮತ್ತು 'ನಮಸ್ತೆ ಇಂಗ್ಲೆಂಡ್' ಚಿತ್ರಗಳಲ್ಲಿ ಒಟ್ಟಿಗೆ ಒಂದೇ ಸಮಯದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಬೇಕಾದ ತಮ್ಮ ಅನಿವಾರ್ಯತೆಯನ್ನು ಹೇಳಿಕೊಂಡರು.
 
'ಬ್ರದರ್ಸ್‌' ನಂತರ 'ಕೇಸರಿ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಒಂದಾಗಿದ್ದಾರೆ. ಈ ಚಿತ್ರವು ಸಾರಗರ್ಹಿ ಕದನ ಹಾಗೂ ಐತಿಹಾಸಿಕ ನಾಟಕವನ್ನು ಆಧರಿಸಿದ್ದು ಮುಂದಿನ ವರ್ಷ ಹೋಳಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments