Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ 10ರ ಸ್ಪರ್ಧೆಗೆ ಬರ್ತಾಳಂತೆ ಪಾಕಿಸ್ತಾನಿ ಮಾಡೆಲ್ ಕಂದೀಲ್ ಬಲೊಚ್?

ಬಿಗ್ ಬಾಸ್ 10ರ ಸ್ಪರ್ಧೆಗೆ ಬರ್ತಾಳಂತೆ ಪಾಕಿಸ್ತಾನಿ ಮಾಡೆಲ್ ಕಂದೀಲ್ ಬಲೊಚ್?
ಮುಂಬೈ , ಶನಿವಾರ, 4 ಜೂನ್ 2016 (17:52 IST)
ಈ  ಬಾರಿ ಬಿಗ್ ಬಾಸ್-10 ಸಾಕಷ್ಟು  ಕುತೂಹಲ ಮೂಡಿಸುತ್ತಿದೆ.. ಯಾಕಂದ್ರೆ ಈ ಬಾರಿ ಬಿಗ್ ಬಾಸ್‌-10ರ  ಸ್ಪರ್ಧೆಗೆ ಭಾಗಿಯಾಗಲು ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದೆ. ಅದರಲ್ಲೂ ಇಂಟರ್‌ಸ್ಟಿಂಗ್ ವಿಷ್ಯ ಅಂದ್ರೆ ವಿರಾಟ್ ಕೊಹ್ಲಿಗೆ ಲವ್ ಪ್ರಪೋಜ್ ಮಾಡಿ ಸುದ್ದಿ ಮಾಡಿದ್ದ ಪಾಕಿಸ್ತಾನದ ಮಾಡೆಲ್ ಕಂದಿಲ್ ಬಲೊಚ್ ಈ ಬಾರಿಯ ಬಿಗ್ ಬಾಸ್-10ರ ಸ್ಪರ್ಧೆಯಾಗಿ ಭಾಗಿವಹಿಸಲಿದ್ದಾಳಂತೆ..!

ಭಾರತ-ಪಾಕಿಸ್ತಾನ ಟಿ-20 ವಿಶ್ವ  ಕಪ್ ವೇಳೆ ಪಾಕಿಸ್ತಾನ ಸೋತಾಗ ಕಣ್ಣೀರು ಹಾಕಿರುವ ವಿಡಿಯೋ ಅಪಲೋಡ್ ಮಾಡಿ ಸುದ್ದಿ ಮಾಡಿದ್ದ ಕಂದಿಲ್ ಬಲೋಚೋ, ಈ ಬಾರಿ ಬಿಗ್ ಬಾಸ್-10 ರಲ್ಲಿ ಸ್ಪರ್ಧಿಯಾಗಿ  ಭಾಗಿಯಾಗಲಿದ್ದಾಳೆ ಎಂದು ಹೇಳಲಾಗ್ತಿದೆ.

ಇನ್ನೂ ಕಂದೀಲ್ ತಾನು ಬಿಗ್ ಬಾಸ್‌-10ರಲ್ಲಿ  ಭಾಗಿಯಾಗುತ್ತಿರುವ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದಾಳೆ..
 
ಈ ಹಿಂದೆ ಕೂಡ ಕಂದಿಲ್ ವಿರಾಟ ಕೊಹ್ಲಿ ನಾನು ನಿನಗಾಗಿ ಹುಚ್ಚಳಾಗಿದ್ದೇನೆ, ನೀನು ಅನುಷ್ಕಾ ಶರ್ಮಳನ್ನು ಬಿಟ್ಟು ಬಿಡು, ನನ್ನ ಹತ್ತಿರ ಬಾ ಎಂದು ಪಾಕ್‌ನ ಮಾಡೆಲ್ ಕಂದಿಲ್ ಬಲೋಚಾ ಹೇಳಿದ್ದಳು. ವಿರಾಟ್ ಕೋಹ್ಲಿ ಮೇಲೆ ಪ್ರೀತಿ ವ್ಯಕ್ತಪಡಿಸಿದ್ದಳು.

ಈ ಹಿಂದೆ ಟಿ-20 ವಿಶ್ವಕಪ್ ಪಾಕ್ ಸೋಲಿನ ಬಳಿಕ ಭಾರತವನ್ನು ಸೋಲಿಸಿದರೆ ಪಾಕಿಸ್ತಾನ ಆಟಗಾರರಿಗಾಗಿ ಬೆತ್ತಲಾಗುತ್ತೇನೆಂದು ಹೇಳಿದ್ದ ನಟಿ ಕಂದಿಲ್ ಸೋತಾಗ ಅಸಮಾಧಾನ ವ್ಯಕ್ಯಪಡಿಸಿದ್ದಳು. ವಿಡಿಯೋವನ್ನು ಸಾಮಾಜಿಕ ಸಾಲತಾಣದಲ್ಲಿ ಹಾಕಿದ್ದಳು. ವಿಡಿಯೋದಲ್ಲಿ ಪಾಕಿಸ್ತಾನ ಸೋಲಿಗೆ ಕಣ್ಣೀರು ಹಾಕಿ, ಪಾಕ್ ಆಟಗಾರರಿಗೆ ಬೆದರಿಕೆ ಹಾಕಿದ್ದಳು. ಈ 
 
ಈ ಹಿಂದಷ್ಟೆ ಭಾರತವನ್ನು ಸೋಲಿಸಿದರೆ ಪಾಕಿಸ್ತಾನ ಆಟಗಾರರಿಗಾಗಿ ಬೆತ್ತಲಾಗುತ್ತೇನೆಂದು ಹೇಳಿದ್ದ ನಟಿ ಕಂದಿಲ್ ಇದೀಗ  ಬಿಗ್ ಬಾಸ್ ವಿಷಯಕ್ಕೆ ಸುದ್ದಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೌಸ್‌ಫುಲ್-3ಚಿತ್ರ ವೀಕ್ಷಿಸಿದ ಬಾಲಿವುಡ್ ದಿಗ್ಗಜರು...