Select Your Language

Notifications

webdunia
webdunia
webdunia
webdunia

ಆನ್‌ಲೈನ್‌ನಲ್ಲಿ ಚಿತ್ರ ಲೀಕ್.. ಅಪರಾಧಿಗಳಿಗೆ ಜೈಲು ಶಿಕ್ಷೆ ಆಗಬೇಕು- ಸಲ್ಮಾನ್ ಖಾನ್

ಸಲ್ಮಾನ್ ಖಾನ್
ಮುಂಬೈ , ಶನಿವಾರ, 16 ಜುಲೈ 2016 (19:55 IST)
ಆನ್‌ಲೈನ್‌ನಲ್ಲಿ ಚಿತ್ರ ಲೀಕ್‌ಗೆ ಸಂಬಂಧಪಟ್ಟಂತೆ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.  ಚಿತ್ರ ಲೀಕ್‌‌ನಲ್ಲಿ ಭಾಗಿಯಾದ ಅಪರಾಧಿಗಳಿಗೆ ಜೈಲು ಶಿಕ್ಷೆ ಆಗಬೇಕು ಎಂದು ಸಲ್ಮಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಸುಲ್ತಾನ್ ಚಿತ್ರ ರಿಲೀಸ್ ಆಗುವ ಮೊದಲು ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. 

 
ಚಿತ್ರ ಬಿಡುಗಡೆಗೆ ಮುನ್ನವೇ ಉಡ್ತಾ ಪಂಜಾಬ್, ಗ್ರೇಟ್ ಗ್ರ್ಯಾಂಡ್ ಮಸ್ತಿ ಹಾಗೂ ಸುಲ್ತಾನ್ ಚಿತ್ರಗಳು ಲೀಕ್ ಆಗಿದ್ದವು.  ಒಬ್ಬ ವ್ಯಕ್ತಿ ಕಷ್ಟ ಪಟ್ಟು ದುಡಿದ  ದುಡ್ಡನ್ನು ಮತ್ತೊಬ್ಬ ವ್ಯಕ್ತಿ ದೋಚುತ್ತಾನೆ. ಇದು ಕೆಟ್ಟ ವೃತ್ತಿಯಾಗಿದೆ ಎಂದು ಸಲ್ಮಾನ್ ಖಾನ್ ಸಂದರ್ಶನದ ವೇಳೆ ಹೇಳಿದ್ದಾರೆ. 
 
ಟಿಎಡಿಎವನ್ನು ( ಭಯೋತ್ಪಾದಕ ಹಾಗೂ ಚಟುವಟಿಕೆ ತಡೆ ಕಾಯ್ದೆ) ಹಾಕುವಂತೆ ನಟ ಸಲ್ಮಾನ್ ಖಾನ್ ಸಲಹೆ ನೀಡಿದ್ದಾರೆ. ಯಾರು ಡಿವಿಡಿಯನ್ನು ಕೊಂಡುಕೊಳ್ಳುವಲ್ಲಿ ಹಾಗೂ ಮಾರುವಲ್ಲಿ ಸಫಲರಾಗುತ್ತಾರೆ ಅಂಥವರಿಗಾಗಿ ಕಾಯ್ದೆ ಅನ್ವಯವಾಗಲಿದೆ. ಆದ್ರೆ ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚು ಟ್ಯಾಕ್ಸ್ ವಿಧಿಸಲಾಗುತ್ತದೆ ಎಂದು ಸಲ್ಮಾನ್ ತಿಳಿಸಿದ್ದಾರೆ. 
 
ಕೆಲ ಕಡೆಗಳಲ್ಲಿ ವಿಕೆಂಡ್‌ನಲ್ಲಿ ಸುಲ್ತಾನ್ ಚಿತ್ರದ ಟಿಕೆಟ್‌ ದರವನ್ನು ಕಡಿಮೆ ಮಾಡಲಾಗಿದೆ. ಇನ್ನೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ಟಿಕೆಟ್ ದರವನ್ನು ಹೆಚ್ಚಿಸಲಾಗಿಲ್ಲ ಎಂದು ತಿಳಿಸಿದ ಸಲ್ಮಾನ್ ಖಾನ್, ಕೆಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಸಲ್ಮಾನ್ ಖಾನ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಅಮಿರ್ ಖಾನ್ ಅಭಿನಯದ 'ದಂಗಾಲ್' ಚಿತ್ರ ಪ್ರಚಾರ ಮಾಡಲಿರುವ ಅಜಯ್ ದೇವಗನ್