ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದ ಸುಲ್ತಾನ್ ಸಿನಿಮಾ ರಿಲೀಸ್ ಆದ ಬಳಿಕವೂ ತನ್ನ ಆರ್ಭಟವನ್ನು ಹಾಗೇ ಮುಂದುವರೆಸಿದೆ. ಸಿನಿಮಾ ರಿಲೀಸ್ ಆದ ಮೊದಲ ದಿನವೇ ಈ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತೆ ಅನ್ನೋ ಸೂಚನೆಯನ್ನು ಕೊಟ್ಟಿತ್ತು. ಇದೀಗ ಆ ಸೂಚನೆ ನಿಜವಾಗಿದೆ.
ಹೌದು... ಸುಲ್ತಾನ್ ಸಿನಿಮಾ ರಿಲೀಸ್ ಆದ ನಾಲ್ಕೇ ದಿನದಲ್ಲಿ ಬರೋಬ್ಬರಿ 142 ಕೋಟಿ ರೂಪಾಯಿ ಗಲಿಕೆ ಮಾಡಿತ್ತು. ಆಗಲೇ ಬಾಲಿವುಡ್ ದಿಗ್ಗಜರು ಈ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಇನ್ನೂರು ಕೋಟಿ ಗಳಿಕೆ ಮಾಡುತ್ತೆ ಅಂತಾ ಭವಿಷ್ಯ ನುಡಿದಿದ್ದರು. ಇದೀಗ ಆ ಭವಿಷ್ಯ ನಿಜವಾಗಿದೆ. ಸಿನಿಮಾ ರಿಲೀಸ್ ಆಗಿ ಒಂದು ವಾರದಲ್ಲಿ ಬರೋಬ್ಬರಿ 208 ಕೋಟಿ ಕಲೆಕ್ಷನ್ ಮಾಡಿ ಸಲ್ಮಾನ್ ಖಾನ್ ಅವರು ಬಾಕ್ಸಾಫೀಸ್ ಕಿಂಗ್ ಅನ್ನೋದನ್ನು ಪ್ರೂವ್ ಮಾಡಿದೆ.ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸುಲ್ತಾನ್ ಆರ್ಭಟ ಜೋರಾಗಿದೆ.
ಇನ್ನು ಸುಲ್ತಾನ್ ಸಿನಿಮಾ ರಿಲೀಸ್ ಗೂ ಮುನ್ನವೇ ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು.ಆನ್ ಲೈನ್ ನಲ್ಲಿ ಸಿನಿಮಾ ಸೋರಿಕೆಯಾಗಿದ್ರೂ ಕೂಡ ಅಭಿಮಾನಿಗಳು ಮಾತ್ರ ಚಿತ್ರಮಂದಿರಗಳಲ್ಲೇ ಸುಲ್ತಾನ್ ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ ಅನ್ನೋದಕ್ಕೆ ಸುಲ್ತಾನ್ ಗಳಿಕೆಯೇ ಸಾಕ್ಷಿ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.