Select Your Language

Notifications

webdunia
webdunia
webdunia
webdunia

ಆನ್‍ಲೈನ್‌ನಲ್ಲಿ ಸಂಪೂರ್ಣ ಲೀಕ್ ಆದ ’ರಂಗೂನ್’

ಆನ್‍ಲೈನ್‌ನಲ್ಲಿ ಸಂಪೂರ್ಣ ಲೀಕ್ ಆದ ’ರಂಗೂನ್’
Mumbai , ಶುಕ್ರವಾರ, 3 ಮಾರ್ಚ್ 2017 (11:00 IST)
ಆನ್‌ಲೈನ್ ಪೈರಸಿ ಇಂದು ಚಿತ್ರೋದ್ಯಮಕ್ಕೆ ಸಾಕಷ್ಟು ನಷ್ಟ ಉಂಟುಮಾಡುತ್ತಿದೆ. ಶಾರುಖ್ ಖಾನ್ ಅಭಿನಯದ ರಯೀಸ್, ಅಮೀರ್ ಖಾನ್‌ರ ದಂಗಲ್ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದವು. ಈಗ ’ರಂಗೂನ್’ ಚಿತ್ರದ ಸರದಿ. ಸಂಪೂರ್ಣ ಚಿತ್ರವನ್ನು ಕಿಡಿಗೇಡಿಗಳು ಆನ್‌ಲೈನ್‌ನಲ್ಲಿ ಹಾಕಿದ್ದಾರೆ.
 
ಫೆಬ್ರವರಿ 24ರಂದು ರಂಗೂನ್ ಪ್ರೇಕ್ಷಕರ ಮುಂದೆ ಬಂದಿತ್ತು. ಬಿಡುಗಡೆಯಾದ ಕೂಡಲೆ ಇಂಟರ್‌ನೆಟ್‌ನಲ್ಲಿ ಕಾಣಿಸಿಕೊಂಡಿದೆ ರಂಗೂನ್. ಇದರಿಂದ ಚಿತ್ರದ ಗಳಿಕೆಗೂ ಹೊಡೆತ ಬಿದ್ದಿದೆ. ಭಾರಿ ನಿರೀಕ್ಷೆಗಳೊಂದಿಗೆ ತೆರೆಕಂಡ ರಂಗೂನ್‍ಗೆ ಓಪನಿಂಗ್ ವೀಕೆಂಡ್ ಅಷ್ಟಾಗಿ ಸದ್ದು ಮಾಡಲಿಲ್ಲ. 
 
ಈಗ ಸಿನಿಮಾ ಆನ್‍ಲೈನ್‌ನಲ್ಲಿ ಲೀಕ್ ಆಗಿರುವ ಕಾರಣ ಚಿತ್ರದ ಗಳಿಕೆ ಇನ್ನಷ್ಟು ಕುಸಿತ ಕಂಡಿದೆ. ಪೈರಸಿ ಮಾಡುತ್ತಿರುವವರನ್ನು ಕಂಡುಹಿಡಿಯಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಎರಡನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಸಾಗುವ ಕಥಾಹಂದರನ್ನು ರಂಗೂನ್ ಒಳಗೊಂಡಿದೆ. ವಿಶಾಲ್ ಭಾರದ್ವಾಜ್ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಸೈಫ್ ಆಲಿ ಖಾನ್, ಶಾಹಿದ್ ಕಪೂರ್, ಕಂಗನಾ ರನೌತ್ ಅಭಿನಯಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಲೂನ್ ಜತೆ ಸರಸವಾಡುತ್ತಾ ಬಿಕಿನಿಯಲ್ಲಿ ಎಮಿ ಜಾಕ್ಸನ್