Select Your Language

Notifications

webdunia
webdunia
webdunia
webdunia

ಮೇಘನಾ ರಾಜ್‌ಗೆ ಧ್ರುವ ಸರ್ಜಾ ತುಂಬಾನೇ ಇಷ್ಟವಂತೆ

ಮೇಘನಾ ರಾಜ್‌ಗೆ ಧ್ರುವ ಸರ್ಜಾ ತುಂಬಾನೇ ಇಷ್ಟವಂತೆ
ಬೆಂಗಳೂರು , ಬುಧವಾರ, 25 ಮೇ 2016 (10:25 IST)
ಮೇಘನಾ ರಾಜ್. ಕನ್ನಡ ಪ್ರತಿಭೆಗಳಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೊಷಾಯ್ ದಂಪತಿಯ ಪುತ್ರಿ. ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು ಮಲೆಯಾಳಂ ಸಿನಿಮಾಗಳಲ್ಲಿ ಅಭಿನಯಿಸಿರುವ ಮೇಘನಾ ರಾಜ್ ಅಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಮೇಘನಾ ಅವರು ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷೆಯಲ್ಲಿ ಅಭಿನಯಿಸಿದ್ರೂ ಕನ್ನಡದಲ್ಲಿ ಅವರಿಗೆ ಗಾಸಿಪ್ ಗಳೇನು ತಪ್ಪಿದ್ದಲ್ಲ.
 ಮೇಘನಾ ರಾಜ್ ಹಾಗೂ ನಟ ಚಿರಂಜೀವಿ ಸರ್ಜಾ ಅವರ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅನ್ನೋ ಮಾತುಗಳು ಸ್ಯಾಂಡಲ್ ವುಡ್ ಅಂಗಳದಲ್ಲಿ ಅನೇಕ ಬಾರಿ ಕೇಳಿ ಬಂದಿದ್ದವು.ಆದ್ರೆ ಮೇಘನಾ ಆಗಲಿ ಇಲ್ಲಾ ಚಿರುವೇ ಆಗಲಿ ಈ ಬಗ್ಗೆ ತಲೆನೇ ಕೆಡಿಸಿಕೊಂಡಿರಲಿಲ್ಲ. 
 
ಆದ್ರೀಗ ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಾಕಿರೋ ಫೋಟೋ ಒಂದು ಸ್ಯಾಂಡಲ್ ವುಡ್ ನಲ್ಲಿ ಟೌಕ್ ಆಫ್ ದಿ ಟೌನ್ ಆಗಿದೆ.
 ಚಿರಂಜೀವಿ ಸರ್ಜಾ ಮಾವನ ಮಗಳು ಐಶ್ವರ್ಯಾ ಸರ್ಜಾ ಕನ್ನಡದಲ್ಲಿ ಚೊಚ್ಚಲ ಸಿನಿಮಾ ಮಾಡುತ್ತಿರೋದು ನಿಮಗೆಲ್ಲಾ ಗೊತ್ತೇ. ಅರ್ಜುನಾ ಸರ್ಜಾ ಅವರೇ ಮಗಳಿಗಾಗಿ ಪ್ರೇಮಬರಹ ನೂರ ತರಹ ಅನ್ನೋ ಸಿನಿಮಾ ಮಾಡುತ್ತಿದ್ದಾರಂತೆ. 
 
ಮೇಘನಾ ರಾಜ್ ಇತ್ತೀಚೆಗೆ ಐಶ್ವರ್ಯಾ ಸರ್ಜಾ ಅವರೊಂದಿಗೆ ಭೋಜನ ಕೂಟಕ್ಕೆ ತೆರಳಿದ್ದರಂತೆ. ಈ ವೇಳೆ ಧ್ರುವ ಸರ್ಜಾ ಕೂಡ ಇದ್ರಂತೆ. ಈ ಸಮಯದಲ್ಲಿ ಮೇಘನಾ ಧ್ರುವ ಅವರೊಂದಿಹೆ ಸೆಲ್ಫಿ ತೆಗೆಸಿಕೊಂಡಿದ್ದಾರೆ.ಅಲ್ಲದೇ ಅದನ್ನು ಟ್ವಿಟರ್ ನಲ್ಲಿ ಶೇರ್ ಮಾಡದ್ದಾರೆ. ಅಲ್ಲದೇ ಅದಕ್ಕೆ ಮೈ ಫೆವರೇಟ್ ಸರ್ಜಾ ಅಂತಾ ಕ್ಯಾಪ್ಶನ್ ನೀಡಿದ್ದಾರೆ. ಇದು ಈಗ ಗಾಂಧೀನಗರದ ಗಲ್ಲಿ ಗಲ್ಲಿಗಳಲ್ಲಿ ಗುಸುಗುಸಿಗೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಸಾಮಾಜಿಕ ಕಳಿಕಳಿಯ ಸಿನಿಮಾಜದಲ್ಲಿ ಸಂಚಾರಿ ವಿಜಯ್ ಅಭಿನಯ