Publish Date: Sat, 19 Nov 2016 (14:53 IST)
Updated Date: Sat, 19 Nov 2016 (15:03 IST)
ನವದೆಹಲಿ: ಪ್ಯಾರಿಸ್ ನ ಅಪಾರ್ಟ್ ಮೆಂಟ್ ನಲ್ಲಿ ತಮ್ಮ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆಯಿಂದ ತಾನು ವಿಚಲಿತನಾಗಿಲ್ಲ ಎಂದು ಬಾಲಿವುಡ್ ಬೆಡಗಿ ಮಲ್ಲಿಕಾ ಶೆರಾವತ್ ಹೇಳಿಕೊಂಡಿದ್ದಾರೆ.
ಟ್ವಿಟರ್ ನಲ್ಲಿ ಸಂದೇಶ ಬರೆದಿರುವ ಅವರು ನನ್ನನ್ನು ಕೆಡವಲು ಮೂರು ಜನ ಮುಸುಕುಧಾರಿಗಳಿದ್ದರೆ ಸಾಲದು. ನಾನು ಸಾಮರ್ಥ್ಯಶಾಲಿ ಮಹಿಳೆ ಎಂದಿದ್ದಾರೆ. ಈ ಮೂಲಕ ತಾನು ದಾಳಿಯಿಂದ ವಿಚಲಿತಳಾಗಿಲ್ಲ ಎಂದು ಸಂದೇಶ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಶೆರಾವತ್ ಮೇಲೆ ಪ್ಯಾರಿಸ್ ನ ಆಕೆಯ ಅಪಾರ್ಟ್ ಮೆಂಟ್ ನಲ್ಲಿ ಮೂವರು ಮುಸುಕುಧಾರಿಗಳು ಟಿಯರ್ ಗ್ಯಾಸ್ ಸಿಂಪಡಿಸಿ ಹಲ್ಲೆ ನಡೆಸಿದ್ದರು. ಈ ರೀತಿ ಟಿವಿ ತಾರೆ ಕಿಮ್ ಕರ್ದಾಶೇ ಮೇಲೂ ಫ್ರಾನ್ಸ್ ರಾಜಧಾನಿಯಲ್ಲಿ ಹಲ್ಲೆ ನಡೆದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ