Select Your Language

Notifications

webdunia
webdunia
webdunia
webdunia

ಮಲೈಕಾ ಅರೋರಾ ಖಾನ್ ಸೌಂದರ್ಯ ಅನಾವರಣ

ಮಲೈಕಾ ಅರೋರಾ ಖಾನ್ ಸೌಂದರ್ಯ ಅನಾವರಣ
Mumbai , ಮಂಗಳವಾರ, 7 ಫೆಬ್ರವರಿ 2017 (12:06 IST)
ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಖಾನ್ ದಕ್ಷಿಣದ ಕೆಲವು ಚಿತ್ರಗಳಲ್ಲಿ ಐಟಂ ಡ್ಯಾನ್ಸ್ ಮೂಲಕ ಸೊಂಟ ಕುಣಿಸಿದವರು. ಇದೀಗ ಲಾಕ್ಮೆ ಫ್ಯಾಷನ್ ವೀಕ್ ಸಮ್ಮರ್ 2017ರಲ್ಲಿ ಬೆಕ್ಕಿನ ನಡಿಗೆ ಮೂಲಕ ಮತ್ತೆ ಎಲ್ಲರ ಗಮನಸೆಳೆದಿದ್ದಾರೆ.
 
ದಿವ್ಯಾ ರೆಡ್ಡಿ ಜತೆಗೆ ಹೆಜ್ಜೆ ಹಾಕುತ್ತಿದ್ದರೆ ಕ್ಯಾಮೆರಾ ಕಣ್ಣುಗಳು ಅವರ ಸೌಂದರ್ಯವನ್ನು ಸೆರೆಹಿಡಿಯುತ್ತಿದ್ದವು. ಸರಳ ಸುಂದರವಾದ ಚೋಲಿ, ಹಳದಿ ಬಣ್ಣದ ಲೆಹಂಗಾ ತೊಟ್ಟು ಚಿತ್ರರಸಿಕರ ನಿದ್ದೆಗೆ ತಣ್ಣೀರೆರಚಿದ್ದಾರೆ ಮಲೈಕಾ ಅರೋರಾ ಖಾನ್.
 
ಅದರಲ್ಲೂ ಹಣೆಗೆ ಕುಂಕುಮ, ತುಟಿಗೆ ಹಚ್ಚಿದ್ದ ರಂಗು ಇನ್ನಷ್ಟು ಆಕರ್ಷಕವಾಗಿ ಕಾಣುತ್ತಿತ್ತು. ಇದೆಲ್ಲಾ ಹೇಳೋದಕ್ಕಿಂತ ಫೋಟೋದಲ್ಲಿ ನೋಡೋದೆ ಚೆಂದ ಅಲ್ಲವೇ. ಇನ್ನು ಅವರ ಸಿನಿಮಾ ವಿಷಯಕ್ಕೆ ಬಂದರೆ ರಾಬ್ತಾ, ಪದ್ಮಾವತಿ ಮತ್ತು ಸಂಜಯ್ ದತ್ ಬಯೋಪಿಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಊರಿನಲ್ಲಿ ಚಿತ್ರೀಕರಣವಾಗಿರುವ ಚಿತ್ರ ’ಈ ಕಲರವ’