Select Your Language

Notifications

webdunia
webdunia
webdunia
webdunia

ಗಾಯನ ನಿಲ್ಲಿಸಿದ ಕೋಗಿಲೆ: ಭಾರತ ರತ್ನ ಲತಾ ಮಂಗೇಶ್ಕರ್ ಇನ್ನು ನೆನಪು ಮಾತ್ರ

ಗಾಯನ ನಿಲ್ಲಿಸಿದ ಕೋಗಿಲೆ: ಭಾರತ ರತ್ನ ಲತಾ ಮಂಗೇಶ್ಕರ್ ಇನ್ನು ನೆನಪು ಮಾತ್ರ
ಮುಂಬೈ , ಭಾನುವಾರ, 6 ಫೆಬ್ರವರಿ 2022 (09:58 IST)
ಮುಂಬೈ: ಹಿರಿಯ ಗಾಯಕಿ, ಭಾರತದ ಗಾನ ಕೋಗಿಲೆ ಎಂದೇ ಪ್ರಖ್ಯಾತರಾಗಿದ್ದ ಭಾರತ ರತ್ನ ಲತಾ ಮಂಗೇಶ್ಕರ್ ಇನ್ನು ನೆನಪು ಮಾತ್ರ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ 92 ವರ್ಷ ವಯಸ್ಸಿನ ಲತಾ ಕೊನೆಯುಸಿರೆಳೆದಿದ್ದಾರೆ.

ಜನವರಿ 8 ರಂದು ಕೊರೋನಾ ಸೋಂಕಿನಿಂದಾಗಿ ಲತಾ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಒಮ್ಮೆ ಅವರು ಕೊಂಚ ಸುಧಾರಿಸಿಕೊಂಡಿದ್ದರು. ಆದರೆ ನಿನ್ನೆಯಿಂದ ಅವರ ಆರೋಗ್ಯ ಮತ್ತೆ ಗಂಭೀರವಾಗಿತ್ತು. ಇಂದು ಅವರ ನಿಧನದ ಸುದ್ದಿಯನ್ನು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.

ತಮ್ಮ ಸುದೀರ್ಘ ಗಾಯನ  ಜೀವನದಲ್ಲಿ ಅನೇಕ ಹಿಟ್ ಹಾಡುಗಳಿಗೆ ಧ್ವನಿ ನೀಡಿದ್ದ ಲತಾ ಎಂದಿಗೂ ಜನ ಮಾನಸದಲ್ಲಿ ಅಜರಾಮರ. ಅವರ ಸಾಧನೆ ಗುರುತಿಸಿ ಪರಮೋನ್ನತ ಪದವಿ ಭಾರತ ರತ್ನ, ದಾದಾ ಸಾಹೇಬ್ ಫಾಲ್ಕೆ, ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮ ಶ್ರೀ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು. ಅವರ ನಿಧನಕ್ಕೆ ಇಡೀ ರಾಷ್ಟ್ರವೇ ಕಂಬನಿ ಮಿಡಿಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲತಾ ಮಂಗೇಶ್ಕರ್ ಆರೋಗ್ಯ ಗಂಭೀರ: ಆಸ್ಪತ್ರೆಗೆ ಭೇಟಿ ನೀಡಿದ ಆಶಾ ಭೋಸ್ಲೆ