Select Your Language

Notifications

webdunia
webdunia
webdunia
webdunia

ಹೊಸ ವರ್ಷಾಚರಣೆ: 30 ನಿಮಿಷ ನೃತ್ಯಕ್ಕೆ 10 ಕೋಟಿ ಪಡೆದ ಸನ್ನಿ ಲಿಯೋನ್

ಹೊಸ ವರ್ಷಾಚರಣೆ: 30 ನಿಮಿಷ ನೃತ್ಯಕ್ಕೆ 10 ಕೋಟಿ ಪಡೆದ ಸನ್ನಿ ಲಿಯೋನ್
ಕೋಲ್ಕತಾ , ಶನಿವಾರ, 31 ಡಿಸೆಂಬರ್ 2016 (14:16 IST)
ದೇಶಾದ್ಯಂತ ಹೊಸ ವರ್ಷಾಚರಣೆಗೆ ಸಿದ್ದತೆಗಳು ನಡೆಯುತ್ತಿವೆ. ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಕೋಲ್ಕತಾದ ಪಂಚತಾರಾ ಹೋಟೆಲ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, 30 ನಿಮಿಷದ ನೃತ್ಯಕ್ಕೆ ಬರೋಬ್ಬರಿ 10 ಕೋಟಿ ರೂಪಾಯಿಗಳ ಶುಲ್ಕವನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ. 
ಇಂದು ಸಂಜೆ ಅಮ್ಯೂಸ್‌ಮೆಂಟ್ ಪಾರ್ಕ್‌ ಹೋಟೆಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಮ್ಮ ಹಾಟ್ ಹಾಟ್ ನೃತ್ಯದಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
2017ರ ವರ್ಷ ನನ್ನ ಪಾಲಿಗೆ ಅತ್ಯುತ್ತಮ ವರ್ಷವಾಗಲಿದೆ ಎಂದು ಭಾವಿಸುವುದಾಗಿ ಹೇಳಿದ ಸನ್ನಿ ಲಿಯೋನ್ ಅಭಿಮಾನಿಗಳಿಗೆ ವಿಡಿಯೋ ಸಂದೇಶ ರವಾನಿಸಿದ್ದಾರೆ. 
 
ನೋಟು ನಿಷೇಧದ 50 ದಿನಗಳ ಅವಧಿ ಮುಕ್ತಾಯಗೊಂಡ ನಂತರವು ಹಣಕಾಸಿನ ಬಿಕ್ಕಟ್ಟು ಎದುರಾಗಿದ್ದರೂ ಕೆಲ ಮೂಲಗಳಿಂದ ಕಾರ್ಯಕ್ರಮವನ್ನು ಸೂಕ್ತ ಸಮಯಕ್ಕೆ ಆಯೋಜಿಸಲು ಸಾಧ್ಯವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಿರಿಕ್ ಪಾರ್ಟಿಗೆ ಮಾಧ್ಯಮಗಳಿಂದ ಬೊಂಬಾಟ್ ರೇಟಿಂಗ್