Publish Date: Thu, 27 Jul 2017 (07:17 IST)
Updated Date: Thu, 27 Jul 2017 (07:26 IST)
ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಯಶಸ್ಸಿಗೆ ಕಿಚ್ಚಾ ಸುದೀಪ್ ಅವರ ವಿಶಿಷ್ಟ ನಿರೂಪಣಾ ಶೈಲಿ ಕೂಡ ಕಾರಣ ಎಂದರೆ ತಪ್ಪಿಲ್ಲ. ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲು ಸುದೀಪ್ ಕೂಡ ಕಾರಣ. ಹಾಗಾದರೆ ಅವರಿ ಗೆ ಸ್ಪೂರ್ತಿಯಾದ ವ್ಯಕ್ತಿ ಯಾರು ಗೊತ್ತಾ..?
ಸ್ವತ: ಸುದೀಪ್ ಅವರೆ ಈ ಬಗ್ಗೆ ಹೇಳಿದ್ದಾರೆ. ಇದೇ ಬಿಗ್ ಬಾಸ್ ಶೋವನ್ನು ಹಿಂದಿಯಲ್ಲಿ ನಟ ಸಲ್ಮಾನ್ ಖಾನ್ ಹಾಗೂ ಇತ್ತೀಚೆಗೆ ಆರಂಭವಾದ ತಮಿಳು ಬಿಗ್ ಬಾಸ್ ಶೋವನ್ನು ನಟ ಕಮಲ್ ಹಾಸನ್ ನಿರೂಪಿಸುತ್ತಿದ್ದಾರೆ. ಇವರಿಬ್ಬರಿಗಿಂತ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ಶೋ ವನ್ನು ಚೆನ್ನಾಗಿ ನಡೆಸಿಕೊಡುತ್ತಾರೆ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದು, ಈ ಟ್ವೀಟ್ ಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿ ತಮಗೆ ಸ್ಪೂರ್ತಿಯಾರೆಂಬುದನ್ನು ಹೇಳಿದ್ದಾರೆ.
ಆ ಇಬ್ಬರು ದಿಗ್ಗಜರು (ಸಲ್ಮಾನ್ ಖಾನ್, ಕಮಲ್ ಹಾಸನ್) ನನಗೆ ಸ್ಫೂರ್ತಿಯಾಗಿದ್ದು, ನಾನು ಇನ್ನಷ್ಟು ಚೆನ್ನಾಗಿ ನಿರೂಪಣೆ ಮಾಡಲು ಅವರ ಶೈಲಿ ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ. ಸುದೀಪ್ ರ ಈ ಟ್ವಿಟ್ ಗೆ ಪ್ರಶಂಸೆಗಳ ಸುರಿಮಳೆಯೇ ಬಂದಿದೆ.