ಅಭಿನವ ಚಕ್ರವರ್ತಿ ಸುದೀಪ್ ನಿನ್ನೆ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜೆಪಿ ನಗರದ ಸುದೀಪ್ ಮನೆಯಲ್ಲಿ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಇದೇ ವೇಳೆ ತಮ್ಮ ಕೈಯಾರ ಸುದೀಪ್ ಕೇಕ್ ಕಟ್ ಕೂಡ ಮಾಡಿದ್ರು. ವಿಶೇಷವೆಂದರೆ ಸುದೀಪ್ ಅಭಿಮಾನಿಯೊಬ್ಬ ರಕ್ತದಿಂದ ಪತ್ರ ಬರೆಯುವ ಮೂಲಕ ಅಭಿಮಾನ ಮೆರೆದಿದ್ದಾನೆ.
ಸುದೀಪ್ ಹುಟ್ಟುಹಬ್ಬಕ್ಕಾಗಿ ಅಭಿಮಾನಿಯೊಬ್ಬ ರಕ್ತದಿಂದ ಪತ್ರ ಬರೆದು ಶುಭಾಷಯ ತಿಳಿಸಿದ್ದಾನೆ. ಇದನ್ನ ಕಂಡ ನಟ ಸುದೀಪ್ ಅಸಮಾಧಾನಗೊಂಡಿದ್ದು ಕಂಡು ಬಂತು. ಈ ಥರಾ ಮಾಡ್ಬೇಡಿ ಎಂದು ಅಭಿಮಾನಿಗಳಿಗೆ ಕೇಳಿ ಕೊಂಡರು.
ಕೇಕ್‌ಗೆ ಹಾಕೋ ದುಡ್ಡನ್ನು ಬೇರೆಯರಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಸುದೀಪ್ ತಿಳಿಸಿದರು. ಇನ್ನೂ ಕೆಲ ಅಭಿಮಾನಿಗಳಂತೂ ಹೆಬ್ಬುಲಿ ಚಿತ್ರದ ಟ್ಯಾಟು ಹಾಕಿಕೊಂಡಿದ್ದು ವಿಶೇಷವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ