Select Your Language

Notifications

webdunia
webdunia
webdunia
webdunia

ಬೆಂಗಳೂರಿಗೆ ಬರಲಿದ್ದಾಳೆ ಬಾಲಿವುಡ್ ತಾರೆ ಕತ್ರೀನಾ ಕೈಫ್

ಬೆಂಗಳೂರಿಗೆ ಬರಲಿದ್ದಾಳೆ ಬಾಲಿವುಡ್ ತಾರೆ ಕತ್ರೀನಾ ಕೈಫ್
ಬೆಂಗಳೂರು , ಶನಿವಾರ, 30 ಜುಲೈ 2016 (11:14 IST)
ಬೆಂಗಳೂರು ಸಿಟಿ ಬಾಲಿವುಡ್ ಸ್ಟಾರ್‌ಗಳ ಪಾಲಿಗೆ ಫೇವರಿಟ್ ತಾಣಗಳಲ್ಲಿ ಒಂದು.. ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಗಾರ್ಡನ್ ಸಿಟಿಗೆ ಬಂದು ಹೋಗುವುದು ಸಾಮಾನ್ಯ. ಇಚೆಗಷ್ಟೇ ಕಾಜಲ್ ಅಗರ್‌ವಾಲ್, ಬೆನ್ನಿ ಡಿಯಾಲ್ ಕಳೆದ ವಾರದಂದು ಬೆಂಗಳೂರಿಗೆ ಆಗಮಿಸಿ ಮತ್ತೆ ವಾಪಸ್ಸಾಗಿದ್ದರು. ಇದೀಗ ಬಾಲಿವುಡ್ ತಾರೆ ಕತ್ರೀನಾ ಕೈಫ್ ಆಗಮಿಸಲಿದ್ದಾರೆ. 


ಬಾಲಿವುಡ್‌ನ ಹಿರಿಯ ನಟ ಶಕ್ತಿ ಕಪೂರ್ ಕೂಡ ತಮ್ಮ ಚಿತ್ರದ ಪ್ರಚಾರಕ್ಕೆಂದು ಗಾರ್ಡನ್ ಸಿಟಿಗೆ ಬಂದಿದ್ರು.. ಮತ್ತೊಬ್ಬ ಸೆಲೆಬ್ರಿಟಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ.. ಕತ್ರೀನಾ ಅಭಿನಯದ 'ಬಾರ್ ಬಾರ್ ದೇಖೋ' ಚಿತ್ರ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಯಾಟ್ ಬೆಂಗಳೂರಿಗೆ ಆಗಮಿಸಲಿದ್ದಾರೆ. 
 
ಸೋ ನೀವೂ ಕತ್ರೀನಾ ಕೈಫ್ ಜತೆಗೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ದೊರೆಯಬಹುದು. ಅಗಸ್ಟ್ ರಂದು ಬೆಂಗಳೂರಿಗೆ ಕತ್ರೀನಾ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಹಾಡು ಕಾಲಾ ಚಸ್ಮಾ ಎಲ್ಲೆಡೆ ಸದ್ದು ಮಾಡುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಚಿತ್ರದ ಸಾಂಗ್ ವೀಕ್ಷಣೆ ಮಾಡಿದ್ದು, ಕತ್ರೀನಾರ ಲುಕ್ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಇನ್ನೂ ಕತ್ರೀನಾ ಜತೆಗೆ ಬೆಂಗಳೂರಿಗೆ ಕೋೃಸ್ಟಾರ್ ಸಿದ್ದಾರ್ಥ ಮಲ್ಹೋತ್ರಾ ಕೂಡ ಆಗಮಿಸಲಿದ್ದು, ಚಿತ್ರದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

'ಡಿಶೂಂ' ಚಿತ್ರ ಪಾಕಿಸ್ತಾನದಲ್ಲಿ ಬ್ಯಾನ್.. ವರುಣ್ ಧವನ್ ಅಸಮಾಧಾನ