Select Your Language

Notifications

webdunia
webdunia
webdunia
webdunia

'ಡಿಶೂಂ' ಚಿತ್ರ ಪಾಕಿಸ್ತಾನದಲ್ಲಿ ಬ್ಯಾನ್.. ವರುಣ್ ಧವನ್ ಅಸಮಾಧಾನ

'ಡಿಶೂಂ' ಚಿತ್ರ ಪಾಕಿಸ್ತಾನದಲ್ಲಿ ಬ್ಯಾನ್.. ವರುಣ್ ಧವನ್ ಅಸಮಾಧಾನ
ಮುಂಬೈ , ಶನಿವಾರ, 30 ಜುಲೈ 2016 (10:41 IST)
ಜಾನ್ ಅಬ್ರಾಹಂ ವರುಣ್ ಧವನ್ ಅಭಿನಯದ ಡಿಶೂಂ ಚಿತ್ರವು ಎಲ್ಲಡೆ ಸಖತ್ ರೆಸ್ಪಾನ್ಸ್ ಸೀಗುತ್ತಿದೆ. ಮಸಾಲ ಮೂವೀಗಳಲ್ಲಿ ಒಂದಾಗಿರುವ ಡಿಶೂಂ ಚಿತ್ರವನ್ನು ಹಲವು ಪ್ರೇಕ್ಷಕರು ಲೈಕ್ ಮಾಡುತ್ತಿದ್ದಾರೆ. ಆದ್ರೆ ಇದೀಗ ಈ ಚಿತ್ರ ಪಾಕಿಸ್ತಾನದಲ್ಲಿ ತೆರೆ ಕಾಣಲು ಅವಕಾಶ ಸಿಕ್ಕಿಲ್ಲ. ಡಿಶೂಂ ಚಿತ್ರವನ್ನು ಪಾಕ್‌ನಲ್ಲಿ ನಿಷೇಧಿಸಲಾಗಿದ್ದು, ಇದರಿಂದ ವರುಣ್ ಧವನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 
ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನರ್ಗಿಸ್ ಫಕ್ರಿ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಬಿಂದಾಸ್ ಅಭಿನಯ ಎಲ್ಲರನ್ನು ಮೋಡಿ ಮಾಡುತ್ತಿದೆ. ಶುಕ್ರವಾರದಂದು ಚಿತ್ರ ರಿಲೀಸ್ ಆಗಿತ್ತು.

ಈ ಕುರಿತು ಟ್ವಿಟರ್‌ನಲ್ಲಿ ವರುಣ್ ಧವನ್ ಟ್ವಿಟ್ ಮಾಡಿದ್ದಾರೆ. ಪಾಕ್ ನಲ್ಲಿ ಚಿತ್ರ ತೆರೆ ಕಾಣದೇ ಇರುವುದು ಅಸಮಾಧಾನ ತಂದಿದ್ದು, ನಮ್ಮ ಚಿತ್ರದಲ್ಲಿ ಯಾರಿಗೂ ಧಕ್ಕೆ ಮಾಡುವ ಹಾಗೂ ನೋವವನ್ನುಂಟು ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿಲ್ಲ, ಆದ್ರೂ ಪಾಕ್‌ ಚಿತ್ರ ಬ್ಯಾನ್ ಮಾಡಿರುವುದು ಇದೊಂದು ತಪ್ಪು ನಿರ್ಧಾರ ಎಂದು ತಿಳಿಸಿದ್ದಾರೆ. 

'ಡಿಶೂಂ' ಟ್ರೇಲರ್ ಫುಲ್ ಆ್ಯಕ್ಷನ್ ಡ್ರಾಮಾ ಒಳಗೊಂಡಿದ್ದು, ಚಿತ್ರದಲ್ಲಿ ನರ್ಗಿಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಜುಲೈ 29ಕ್ಕೆ ರಿಲೀಸ್ ಆಗಲಿದೆ. ಡಿಶೂಂ ಚಿತ್ರ ಆ್ಯಕ್ಷನ್ ಥ್ರೀಲ್ಲರ್ ಮೂವೀ ಚಿತ್ರದಲ್ಲಿ  ಜಾನ್ ಅಬ್ರಾಹಂ, ಜಾಕ್ವೆಲಿನ್ ಫರ್ನಾಡಿಸ್, ವರುಣ್ ಧವನ್, ನರ್ಗಿಸ್ ಫಕ್ರಿ ಮಿಂಚಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ದಬ್ಬಾಂಗ್ -3 ಚಿತ್ರದಲ್ಲಿ ಮತ್ತೆ ಸಲ್ಮಾನ್ ಜೊತೆಗೆ ಸೋನಾಕ್ಷಿ ನಟಿಸುವುದು ಖಚಿತ