ಕತ್ರೀನಾ ಕೈಫ್ ಹಾಗೂ ರಣ್ ಬೀರ್ ಕಪೂರ್ ನಡುವಿನ ಸಂಬಂಧ ಮುರಿದು ಬಿದ್ದ ಮೇಲೆ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು ಜಗ್ಗ ಜಾಸೂಸ್ ಸಿನಿಮಾದ ಶೂಟಿಂಗ್ ನಲ್ಲೇ. ಶೂಟಿಂಗ್ ನಲ್ಲೂ ಪರಸ್ಪರ ಅವರಿಬ್ಬರು ಮಾತನಾಡಿಕೊಳ್ಳುತ್ತಿರಲಿಲ್ಲ. ಕಳೆದ ಕೆಲ ತಿಂಗಳಿನಿಂದ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ಶೂಟಿಂಗ್ ನಿಂದಾಗಿ ಕತ್ರೀನಾ ಸುಸ್ತಾಗಿದ್ದಾರಂತೆ.
ಕಳೆದ ಕೆಲ ತಿಂಗಳಿಂದ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ಕತ್ರೀನಾ ಹಾಗೂ ರಣ್ ಬೀರ್ ಕಪೂರ್ ಅವರ ನಿರಂತರವಾಗಿ ಸಿನಿಮಾದ ಶೂಟಿಂಗ್ ನ್ಲಲಿ ಭಾಗಿಯಾಗಿತ್ತಿದ್ದಾರೆ.ಆದ್ರೆ ನಿರಂತರವಾದ ಶೂಟಿಂಗ್ ನಿಂದಾಗಿಯೋ ಇಲ್ಲಾ ಒತ್ತಡವೋ ಗೊತ್ತಿಲ್ಲ ಕ್ಯಾಟ್ ಸಿನಿಮಾ ಆರಂಭವಾದ ಬಳಿಕ ತುಂಬಾ ತೆಳ್ಳಗಾಗಿದ್ದಾರಂತೆ.
ಕಳೆದ ವರ್ಷ ಸಿನಿಮಾದ ಶೂಟಿಂಗ್ ಆರಂಭವಾದಾಗ ಕತ್ರೀನಾ ಕೈಫ್ ಅವರು ದಪ್ಪಗಿದ್ದರಂತೆ.ಆದ್ರೆ ಇದೀಗ ಶೂಟಿಂಗ್ ಮುಕ್ತಾಯ ಹಂತ ತಲುಪಿದ್ದು ಕತ್ರೀನಾ ಕೈಫ್ ತುಂಬಾನೇ ತೆಳ್ಳಗಾಗಿದ್ದಾರಂತೆ.
ಇನ್ನು ಕತ್ರೀನಾ ಅವರು ಈ ರೀತಿ ತೆಳ್ಳಗಾಗಿರೋದು ಸಿನಿಮಾ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಯಾಕಂದ್ರೆ ಸಿನಿಮಾ ಆರಂಭವಾದಾಗ ದಪ್ಪಗಿದ್ದ ಕತ್ರೀನಾ ಇದೀಗ ತೆಳ್ಳಗಾಗಿದ್ದಾರೆ. ಹಾಗಾಗಿ ಕೆಲವೊಂದು ದೃಶ್ಯಗಳನ್ನು ಮರು ಚಿತ್ರೀಕರಣ ಮಾಡುವ ಪ್ಲಾನ್ ನಲ್ಲಿದೆಯಂತೆ ಸಿನಿಮಾ ತಂಡ. ಇನ್ನು ಸಿನಿಮಾ ಮುಗಿಯುವ ವೇಳೆಗೆ ಕತ್ರೀನಾ ಹಾಗೂ ರಣ್ ಬೀರ್ ಅವರು ಮತ್ತೆ ಒಂದಾಗುತ್ತಾರಾ ಅನ್ನೋ ಕಾತುರದಲ್ಲಿದ್ದಾರೆ ಅಭಿಮಾನಿಗಳು.