Select Your Language

Notifications

webdunia
webdunia
webdunia
webdunia

ನನ್ನ ತಮ್ಮನಿಗೆ ಆ ಹೀರೋಯಿನ್ ಹೆಂಡತಿಯಾಗುವ ಅರ್ಹತೆ ಇದೆ

ನನ್ನ ತಮ್ಮನಿಗೆ ಆ ಹೀರೋಯಿನ್ ಹೆಂಡತಿಯಾಗುವ ಅರ್ಹತೆ ಇದೆ
Mumbai , ಸೋಮವಾರ, 16 ಜನವರಿ 2017 (09:58 IST)
ಬಾಲಿವುಡ್ ಚಾಕೋಲೆಟ್ ಬಾಯ್ ರಣಬೀರ್ ಕಪೂರ್ ಮದುವೆಗೆ ಸಂಬಂಧ ನೋಡುತ್ತಿದಾರೆ ಆತನ ಅಕ್ಕಂದಿರು ಕರೀನಾ ಕಪೂರ್, ಕರಿಷ್ಮಾ ಕಪೂರ್. ರಣಬೀರ್ ಈಗಾಗಲೆ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಜತೆಗೆ ಪ್ರೇಮ ವ್ಯವಹಾರ ನಡೆಸಿರುವುದು ಗೊತ್ತೇ ಇದೆ. ಕತ್ರಿನಾ ಜತೆಗಂತೂ ಮದುವೆವರೆಗೂ ವ್ಯವಹಾರ ಹೋಗಿತ್ತು.
 
ಇಬ್ಬರೂ ಬೆರೆತು ಮುಂಬೈನ ಫ್ಲಾಟ್ ಒಂದರಲ್ಲಿ ಸಹಜೀವನ ನಡೆಸಿದ್ದಾರೆ ಕೂಡ. ಆದರೆ ಆ ಬಳಿಕ ಏನಾಯಿತೋ ಏನೋ ಗೊತ್ತಿಲ್ಲ, ಅವರಿಬ್ಬರೂ ಬದ್ಧಶತ್ರುಗಳಾಗಿ ಬದಲಾದರು. ಸದ್ಯಕ್ಕೆ ರಣಬೀರ್ ಕಪೂರ್ ಸಿಂಗಲ್ ಆಗಿಯೇ ಇದ್ದಾರೆ. ಹಾಗಾಗಿ ಈಗ ಅಕ್ಕಂದಿರು ಮದುವೆ ಬಗ್ಗೆ ಮಾತನಾಡುತ್ತಿದ್ದಾರೆ.
 
ರಣಬೀರ್‌ಗೆ ಸೂಕ್ತ ಜೋಡಿ ಸೋನಂ ಕಪೂರ್ ಎನ್ನುತ್ತಿದ್ದಾರೆ. ಸೋನಂ ಕೈಹಿಡಿದರೆ ನಮಗೆಲ್ಲಾ ತುಂಬಾ ಸಂತೋಷವಾಗುತ್ತದೆಂದು ಕರಣ್ ಜೋಹಾರ್ ಕಾರ್ಯಕ್ರಮದಲ್ಲಿ ಇವರಿಬ್ಬರೂ ಹೇಳಿಕೊಂಡಿದ್ದಾರೆ. ವಿಶೇಷ ಎಂದರೆ ಸೋನಂ ಮತ್ತು ರಣಬೀರ್ ಇಬ್ಬರೂ ಒಂದೇ ಚಿತ್ರದ ಮೂಲಕ ಬಾಲಿವುಡ್‌ಗೆ ಅಡಿಯಿಟ್ಟವರು. ಆಮೇಲೆ ಇವರಿಬ್ಬರೂ ಚೆನ್ನಾಗಿಯೇ ಇದ್ದರು. ಕೊನೆಗೆ ಇಬ್ಬರ ನಡುವೆ ದೂರ ಬೆಳೆಯಿತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಾವೂದ್ ಮನೆಯಲ್ಲಿ ಖ್ಯಾತ ನಟನ ಪಾರ್ಟಿ