Select Your Language

Notifications

webdunia
webdunia
webdunia
webdunia

ಅಬ್ಬಾ! ಕೊನೆಗೂ ಕರೀನಾ ಕಪೂರ್ ತಮ್ಮ ಮಗನ ಹೆಸರಿನ ಹಿಂದಿರುವ ಸಿಕ್ರೆಟ್ ಬಿಚ್ಚಿಟ್ಟರು!

ಅಬ್ಬಾ! ಕೊನೆಗೂ ಕರೀನಾ ಕಪೂರ್ ತಮ್ಮ ಮಗನ ಹೆಸರಿನ ಹಿಂದಿರುವ ಸಿಕ್ರೆಟ್ ಬಿಚ್ಚಿಟ್ಟರು!
ಮುಂಬೈ , ಸೋಮವಾರ, 12 ಮಾರ್ಚ್ 2018 (06:29 IST)
ಮುಂಬೈ : ತಮ್ಮ ಮಗನಿಗೆ ತೈಮೂರ್ ಎಂದು ಹೆಸರಿಟ್ಟು ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಈಗ ತಮ್ಮ ಮಗನಿಗೆ ಆ ಹೆಸರು ಇಡಲು ಕಾರಣವೆನೆಂಬುದನ್ನು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.


ಈ ಹಿಂದೆ ನಟಿ ಕರೀನಾ ಕಪೂರ್ ಅವರು ತಮ್ಮ ಮಗುವಿಗೆ ತೈಮೂರ್ ಎಂದು ಹೆಸರಿಟ್ಟಾಗ ಭಾರತದ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದ ತೈಮೂರ್ ರಾಜನ ಹೆಸರನ್ನು ಮಗನಿಗೆ ಇಟ್ಟಿದ್ದಾರೆ ಎಂದು ಟೀಕೆಗೆ ಗುರಿಯಾಗಿದ್ದರು. ಆದರೆ ಇದೀಗ ಅವರು ತಮ್ಮ ಮಗನಿಗೆ ಆ ಹೆಸರು ಇಡಲು ಕಾರಣವೆನೆಂಬುದನ್ನು ತಿಳಿಸಿದ್ದಾರೆ. ‘ತೈಮೂರ್ ಎಂಬುದು ಪ್ರಾಚೀನ ಪರ್ಷಿಯನ್ ಹೆಸರಾಗಿದ್ದು, ಇದರ ಅರ್ಥ ಕಬ್ಬಿಣ. ನನಗೆ ಇದರ ಅರ್ಥ ಬಹಳ ಹಿಡಿಸಿತು ಹಾಗೆಯೆ ಇದು ತುಂಬಾ ಮುದ್ದಾಗಿದೆ. ದೇಶದಲ್ಲಿ ಈ ಹೆಸರಿನ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದರೂ ನಾನು ನನ್ನ ಮಗನ ಹೆಸರನ್ನು ಬದಲಾಯಿಸುವುದಿಲ್ಲ. ಭಾರತಕ್ಕೆ ದಾಳಿ ಮಾಡಿದ ರಾಜನ ಹೆಸರು ಟೈಮೂರ್, ನನ್ನ ಮಗನ ಹೆಸರು ತೈಮೂರ್. ಇವೆರಡಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕರೀನಾ ಕಪೂರ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ಊರ್ವಶಿ ರೌಟೇಲಾ ದ್ರೌಪದಿ ಬಗ್ಗೆ ಹೇಳಿದ ಡೈಲಾಗ್ ಈಗ ಆಪತ್ತು ತಂದಿದೆಯಂತೆ!